ಕೋಳಿ ಸೆಡ್ ನಿರ್ಮಿಸಲು ತಂದಿದ ಕಬ್ಬಿಣದ ಪೈಪ್ ಕದ್ದ ಕಳ್ಳರು
ಚಳ್ಳಕೆರೆ: ಹೊಸದಾಗಿ ಕೋಳಿ ಸೆಡ್ ನಿರ್ಮಿಸಲು ಸಾವಿರಾರು ರೂಪಾಯಿ ಬಂಡವಾಳ ಹಾಕಿ ತಂದಿದ ಕಬ್ಬಿಣದ ಪೈಪ್ ಗಳನ್ನು ಮತ್ತು ಬೆಳೆಗಳಿಗೆ ನೀರು ಹಾಯಿಸಲು ತಂದಿದ ಪೈಪ್ ಗಳನ್ನು ಕಳ್ಳರು ಕದ್ದುವೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ಗೋಮಾಳದ ಸಮೀಪ ಪತ್ರಕರ್ತರಾದ ಈಶ್ವರಪ್ಪ ತಮ್ಮ ಜಮೀನಿನಲ್ಲಿ ಹೊಸದಾಗಿ ಕೋಳಿ ಸೆಡ್ ನಿರ್ಮಿಸಲು, ತಂದಿದ ಕಬ್ಬಿಣದ ಪೈಪ್ ಗಳು ಇನ್ನಿತರೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬಂದು ಕೋಳಿ ಸೆಡ್ ನಿರ್ಮಿಸುತ್ತಿದ್ದು ಇದನ್ನು ಗಮನಿಸಿದ ಕಳ್ಳರು ರಾತ್ರಿ ಸಮಯದಲ್ಲಿ ಜಮೀನಿಗೆ ಹೋಗಿ 12 ಇಂಚು ಉದ್ದ ಮೂರು ಇಂಚು ಅಗಲ ಇರುವ 6 ಪೈಪ್ ಗಳು. ಹಾಗೂ ನೀರಾವರಿ ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಲು ಇದ್ದ 20 ಇಂಚು ಉದ್ದದ 8 ಪೈಪ್ ಗಳನ್ನು ಕದ್ದು ಕೊಂಡು ಹೋಗಿದ್ದಾರೆ.
ಎಂದಿನಂತೆ ಕೋಳಿ ಸೆಡ್ ನಿರ್ಮಿಸುವ ಕೆಲಸವನ್ನು ಮಾಡಲು ಈಶ್ವರಪ್ಪ ತನ್ನ ಜಮೀನಿಗೆ ಕೂಲಿ ಕಾರ್ಮಿಕರುನ್ನು ಒದಾಗ ಕಬ್ಬಿಣದ ಪೈಪ್ ಗಳು, ಬೆಳೆಗಳಿಗೆ ನೀರು ಹಾಯಿಸಲು ಇದ್ದ ಪೈಪ್ ಗಳು ಕಾಣದೆ ಇರುವುದರಿಂದ ಪೋಲಿಸರಿಗೆ ಮಾಹಿತಿ ನೀಡಿದು.
ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

