ಚಳ್ಳಕೆರೆ :
ಹಟ್ಟಿ ಮಲ್ಲಪ್ಪ ನಾಯಕ ಸಂಘದ ಕಾರ್ಯ ತುಂಬಾ ಶ್ಲಾಘನಿಯ ಎಂದು ಜಗಳೂರು ಕ್ಷೇತ್ರದ ಶಾಸಕ ದೇವೇಂದ್ರಪ್ಪ ಹೇಳಿದರು

ಅವರು ಕಾರ್ಯ ನಿಮಿತ್ತ ನೇರ್ಲಕುಂಟೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘದ ವತಿಯಿಂದ ವಾಲ್ಮೀಕಿ ಪುತ್ಥಳಿ ಅನಾವರಣ ವಿಚಾರದಲ್ಲಿ ಮಾತನಾಡಿ.

ಚಳ್ಳಕೆರೆ -ಮೊಣಕಾಲ್ಮೂರು ಜಗಳೂರು ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಅತಿ ಹೆಚ್ಚು ನಾಯಕ ಜನಸಂಖ್ಯೆ ಇದ್ದು ವಾಲ್ಮೀಕಿಯ ಮತ್ತು ಶ್ರೀ ರಾಮನ ಆದರ್ಶಗಳನ್ನು ಬಹುತೇಕ ಮೈಗೂಡಿಸಿಕೊಂಡಿದ್ದಾರೆ ಈ ತಾಲೂಕುಗಳಲ್ಲಿ ವಾಲ್ಮೀಕಿ ಪುತ್ತಳಿ ಅನಾವರಣವೇ ಈ ಎಲ್ಲರಿಗೂ ಒಂದು ಸಂಭ್ರಮದ ಮಾತು ಮುಂದಿನ ತಿಂಗಳು 7ನೇ ತಾರೀಕು ನಾಯಕನಟ್ಟಿ ಪಟ್ಟಣದಲ್ಲಿ ಆಯೋಜಿಸಿರುವಂತಹ ಈ ಕಾರ್ಯಕ್ರಮ ಈ ಭಾಗದ ಜನರಿಕೊಂಡು ಹಬ್ಬದ ಸಂಭ್ರಮ ಈ ಜನಗಳ ಹಿತವನ್ನ ಇಟ್ಟುಕೊಂಡು ಈ ಸಂಘವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಇನ್ನೂ ಹೆಚ್ಚು ಹೆಚ್ಚು ಕಾರ್ಯಗಳನ್ನು ಕೈಗೊಳ್ಳಬೇಕು ಜನಾಂಗದ ಇತಿಹಾಸ ಮತ್ತು ಪರಂಪರೆ ಇಷ್ಟಕ್ಕೆ ಸೀಮಿತವಾಗದೆ ಶೈಕ್ಷಣಿಕವಾಗಿ ಇನ್ನೂ ಹೆಚ್ಚು ಹೆಚ್ಚು ಪ್ರಗತಿ ಸಾಧಿಸಬೇಕಿದೆ ಅತಿ ಹೆಚ್ಚು ಬಡವರು ಮತ್ತು ಸಾಕ್ಷರತಾ ಪ್ರಮಾಣ ಕಡಿಮೆ ಇರುವಂತಹ ಈ ಭಾಗದಲ್ಲಿ ಇಂತಹ ನಿಸ್ವಾರ್ಥ ಕಾರ್ಯವನ್ನು ಕೈಗೊಂಡಿರುವುದು ನಿಜಕ್ಕೂ ಕೂಡ ಸ್ಲಾಘನೀಯ ಈ ಸಂಘದ ವತಿಯಿಂದ ಆಯೋಜಿಸಿರುವಂತಹ ಅತ್ಯಂತ ಅದ್ದೂರಿ ಮತ್ತು ಸಂಭ್ರಮದ ಈ ಕಾರ್ಯಕ್ರಮ ಯಶಸ್ವಿಯಾಗಲಿ ಈ ಕಾರ್ಯಕ್ಕೆ ನನ್ನ ಗರಿಷ್ಠ ನೆರವು ನೀಡುವುದರ ಜೊತೆಗೆ ಕಾರ್ಯಕ್ರಮಕ್ಕೂ ಕೂಡ ಖುದ್ದು ಹಾಜರಾಗುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ವಾಲ್ಮೀಕಿ ಭವನಕ್ಕೆ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಎಲ್ಲ ಪದಾಧಿಕಾರಿಗಳೊಂದಿಗೆ , ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ, ಭೇಟಿ ನೀಡಿ ಕಟ್ಟಡದ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ ತಿಪ್ಪೇಸ್ವಾಮಿ ಯತ್ನಟ್ಟಿ ಗೌಡ್ರು ,, ನಿವೃತ್ತ ತಹಶೀಲ್ದಾರ್ ಎನ್.ರಘಮೂರ್ತಿ, ಮತ್ತು ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!