ಚಳ್ಳಕೆರೆ :
ಚಿತ್ರದುರ್ಗ: ಶತಾಯುಷಿ ಹುಟ್ಟು ಹಬ್ಬ ಆಚರಿಸಿದ
ಮೊಮ್ಮಕ್ಕಳು ಮರಿಮಕ್ಕಳು
ಇಂದಿನ ದಿನಗಳಲ್ಲಿ ಶತಾಯುಷಿಗಳು, ನೋಡಲು ಸಿಗುವುದೇ ಕಷ್ಟ
ಅಂತಹ ಸಮಯದಲ್ಲಿ ಚಿತ್ರದುರ್ಗದ ದೊಡ್ಡ ಪೇಟೆಯ ಶತಾಯುಷಿ,
ಗೌರಮ್ಮ ತಮ್ಮ ನೂರನೇ ಹುಟ್ಟು ಹಬ್ಬವನ್ನು, ನೂರು ಮೊಮ್ಮಕ್ಕಳು
ಮರಿ ಮೊಮ್ಮಕ್ಕಳೊಂದಿಗೆ ಸಡಗರ ಸಂಭ್ರಮಗಳೊಂದಿಗೆ
ಆಚರಿಸಿಕೊಂಡರು. ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿಂದು
ನೂರು ಜನ ಮಕ್ಕಳು ಮೊಮ್ಮಕ್ಕಳೊಂದಿಗೆ ಕೇಕ್ ಕತ್ತರಿಸಿ,
ಶಾತಾಯುಷಿ ಅಜ್ಜಿಯ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿದರು.
ಇಂತಹ ದೃಶ್ಯ ನೋಡಲು ಕಣ್ಣಿಗೆ ಹಬ್ಬದಂತೆ ಕಂಡು ಬಂತು.

