ಚಳ್ಳಕೆರೆ :
ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಕಾಳಜಿ ಮೈಗೂಡಿಸಿಕೊಳ್ಳಿ ಎಂದು
ಹನಗವಾಡಿ ಗ್ರಾಮ ಪಂಚಾಯತಿ
ಸದಸ್ಯ ಪ್ರವೀಣ್‌ ಆರ್.ಬಿ
ಹನಗವಾಡಿ ಹೇಳಿದರು.

ತಾಲೂಕಿನ ಹನಗವಾಡಿ ಗ್ರಾಮದ
ಸರ್ಕಾರಿ ಹಿರಿಯ ಪ್ರೌಢ ಶಾಲೆಯ
ಆವರಣದಲ್ಲಿ ಎಸ್.ಬಿ.ಪಿ.ಕೆ ಪ್ರೌಢಶಾಲೆ ಮತ್ತು ಪುಷ್ಪ ಮಹಲಿಂಗಪ್ಪಶಾಲೆಯ ವತಿ
ಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಶಾಲಾ ಆವರಣದ ಸುತ್ತ ಗಿಡ ಮರ ಬೆಳೆಸಿ, ಮರ ಗಿಡಗಳು ನಾವು ಜೀವಿಸಲು ಅಗತ್ಯ ಆಮ್ಲಜನಕ ನೀಡುತ್ತವೆ. ಸ್ವಚ್ಛ ವಾತವಾರಣ ಪರಿಸರ. ರೂಪಿಸುವಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.

ಉತ್ತಮ ಆರೋಗ್ಯ ಸಂಪಾದಿಸಲು ಉತ್ತಮ ಪರಿಸರ ವ್ಯವಸ್ಥೆಯನ್ನು ರೂಪಿಸಿಕೊಳ್ಳ ಬೇಕು. ಘನ ತ್ಯಾಜ್ಯ ನಿರ್ವಹಣೆ ಬಹಳ ಪ್ರಮುಖವಾಗಿದೆ. ಪ್ಲಾಸ್ಟಿಕ್ ಬಳಸಿದ ಪರಿಸರ ಸ್ನೇಹಿ ಪರಿಕರಗಳನ್ನು ಪರ್ಯಾಯವಾಗಿ ಬಳಸಿ ಎಂದರು.

ಈ ಸಂದರ್ಭದಲ್ಲಿ ಪುಷ್ಪ ಮಹಲಿಂಗಪ್ಪಶಾಲೆಯ ಪ್ರಾಂಶುಪಾಲರಾದ ಸ್ಥಾನಿ ಲೋಬೋ,
ಹನಗವಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಎಸ್.ಎಂ ರೇವಣಸಿದ್ದಪ್ಪ, ಮಾಜಿ
ಅಧ್ಯಕ್ಷರಾದ ಪ್ರಮೋದ್ ಬಣಕಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ನಂತರ ಎರಡು ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಕಾಡು ಜಾತಿಯ ಗಿಡಗಳನ್ನು
ನೀಡಲಾಯಿತು. ಈ ವೇಳೆ ಹನಗವಾಡಿಯ ವಿ.ಎಸ್.ಎಸ್ ಅಧ್ಯಕ್ಷ ಎ.ಮಂಜುನಾಥ್, ಮಾಜಿ
ಅಧ್ಯಕ್ಷ ಡಿ.ಜಿ.ಗಿರೀಶ್, ರಾಕೇಶ್, ವೀರೇಶ್, ಮಂಜುನಾಥ್, ಶಾಲೆಯ ಮುಖ್ಯೋಪಾಧ್ಯಾ
ಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!