ಚಳ್ಳಕೆರೆ :
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಮುದ್ದಾಪುರ ಹೊಸಹಟ್ಟಿ ಗ್ರಾಮದಲ್ಲಿ ನಡೆದ ಶ್ರೀ ಚೌಡೇಶ್ವರಿ ದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭದಕ್ಕೆ ಸಾವಿರಾರು ಭಕ್ತರು ಸಾಕ್ಷಿಕರಿಸಿದರು.
ಇನ್ನೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ದೇವಿ ಕೃಪೆಗೆ ಪಾತ್ರರಾಗಿ, ದರ್ಶನ ಪಡೆದು ಮಾಧ್ಯಮದೊಟ್ಟಿಗೆ ಮಾತನಾಡಿದ ಅವರು,
2024-25 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಹೊಸಹಟ್ಟಿ ಗ್ರಾಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಚೌಡೇಶ್ವರಿ ದೇವಿಯ ನೂತನ ದೇವಸ್ಥಾನ ಇದಾಗಿದೆ, ಸರ್ವ ಭಕ್ತರ ನಂಬಿಕೆಗೆ ಪ್ರತಿಕಾ ಚೌಡೇಶ್ವರಿ ದೇವಿ ಎಂದರು.
ಈ ಸಂದರ್ಭದಲ್ಲಿ ಜಗಳೂರು ಕ್ಷೇತ್ರದ ಶಾಸಕರಾದ ದೇವೇಂದ್ರಪ್ಪ ರವರು, ಮುದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಓಬಳೇಶ್ , ಉಪಾಧ್ಯಕ್ಷರಾದ ಸುಧಾರಾಣಿ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ರಾದ ಹರೀಶ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬುರೆಡ್ಡಿ, ಮುಖಂಡರಾದ ರಾಜಣ್ಣ, ಶೇಖರಪ್ಪ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

