ಚಳ್ಳಕೆರೆ :
ಚಿತ್ರದುರ್ಗದಲ್ಲಿ ಬುಲೆಟ್ ಕಳ್ಳತನ: ಸಿಸಿಟಿವಿಯಲ್ಲಿ
ದೃಶ್ಯ ಸೆರೆ!
ಚಿತ್ರದುರ್ಗದ ದವಳಗಿರಿ ಬಡಾವಣೆಯಲ್ಲಿ ಪವನ್ ಎಂಬುವವರಿಗೆ
ಸೇರಿದ ಬುಲೆಟ್ ಬೈಕ್ ಕಳ್ಳತನವಾಗಿದೆ.
ಕಳೆದ ಎರಡು ದಿನಗಳ
ಹಿಂದೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದ
ದೃಶ್ಯ ಸೆರೆಯಾಗಿದೆ. ಬಡಾವಣೆಯ 5ನೇ ಕ್ರಾಸ್ನಲ್ಲಿ ಈ ಕಳ್ಳತನ
ನಡೆದಿದ್ದು, ಪ್ರಕರಣ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ
ದೂರು ದಾಖಲಾಗಿದೆ. ಕಳ್ಳತನದ ವಿಡಿಯೋ ಇದೀಗ ವೈರಲ್
ಆಗಿದೆ.

