ಚಿತ್ರದುರ್ಗ: ಮಹಿಳೆ ಮೇಲೆ ಹಲ್ಲೆ ಆರೋಪಿ ಬಂಧನ
ಚಿತ್ರದುರ್ಗ ನಗರ ಪೊಲೀಸರು, ಮಹಿಳೆಯ ಮೇಲೆ ಹಲ್ಲೆ ನಡೆಸಿದ
ಹಿನ್ನೆಲೆಯಲ್ಲಿ, ಪೂರ್ವ ಸಜಾ ಆರೋಪಿಯೊಬ್ಬನನ್ನು ವಶಕ್ಕೆ
ಪಡೆದುಕೊಂಡಿದ್ದಾರೆ. ನಗರದ ಜೋಗಿಮಟ್ಟಿ ರಸ್ತೆಯ ಸೋಮ
ಎಂಬಾತ, ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕಳೆದ
ಎರಡು ದಿನಗಳ ಹಿಂದೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದ. ಈ
ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ
ನಡೆಸುತ್ತಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

