ಚಳ್ಳಕೆರೆ :
ರಾತ್ರಿ ವೇಳೆ ವಾಹನ ಸಾವರರ ಕಣ್ಣಿಗೆ ಕಾಣದೆ ಎಷ್ಟೋ ಅಪಘಾತಗಳು ಸಂಭವಿಸುತ್ತಾವೆ ಆದ್ದರಿಂದ ಅಪಘಾತ ದಿಂದ ಪರಾಗಲು ವಾಹನಗಳ ಹಿಂಬದಿಯಲ್ಲಿ ರೆಡಿಯಂ ಸ್ಟಿಕರ್ ಅಂಟಿಸುವ ಮೂಲಕ ಸುರಕ್ಷಿತ ಪ್ರಯಾಣ ಮಾಡಬಹುದು ಎಂದು ಪಿಎಸ್ ಐ ಧರೆಪ್ಪ ಬಾಳಪ್ಪ ದೊಡ್ಡಮನಿ ಸಲಹೆ ನೀಡಿದರು.
ಟ್ರ್ಯಾಕ್ಟರ್, ಎತ್ತಿನ ಗಾಡಿ ಲಾರಿ ಸೇರಿ ವಿವಿಧ ವಾಹನಗಳಿಗೆ
ರೇಡಿಯಂ ಪ್ರತಿಫಲಕಗಳನ್ನು ಅಂಟಿಸುವುದು ಅಗತ್ಯ
ಎಂದು ಪಿಎಸ್ ಐ ಧರೆಪ್ಪ ಬಾಳಪ್ಪ ದೊಡ್ಡಮನಿ ಸಲಹೆ ನೀಡಿದರು.
ಚಳ್ಳಕೆರೆ ನಗರದಲ್ಲಿ ಟ್ರಾಕ್ಟರ್ ಹಾಗೂ ಟ್ರಾಲಿಗಳಿಗೆ
ಪೋಲಿಸ್ ಇಲಾಖೆಯಿಂದ ರೇಡಿಯಂ ಸ್ಟಿಕರ್
ಅಳವಡಿಸಲು ಚಾಲನೆ ನೀಡುವ ಮೂಲಕ
ವಾಹನ ಚಾಲಕರಿಗೆ ರಸ್ತೆ ಸುರಕ್ಷತಾ
ನಿಯಮಗಳ ಜಾಗೃತಿ ಮೂಡಿಸಿ ಮಾತನಾಡಿದರು.
ಪ್ರತಿಯೊಬ್ಬರ ಜೀವವೂ ಅತ್ಯಮೂಲ್ಯವಾದದ್ದು.
ವಾಹನಗಳ
ವೇಗವು ಮಿತಿಯಲ್ಲಿರಬೇಕು. ರಾತ್ರಿ ವೇಳೆ ವಾಹನಗಳಿಗೆ
ರೇಡಿಯಂ
ಪ್ರತಿಫಲಕ ಅಂಟಿಸುವುದರಿಂದ ಹಿಂಬಂದಿ, ಮುಂಬದಿಯ
ವಾಹನ ಸವಾರರಿಗೆ ನಿಮ್ಮ ವಾಹನದ ಗಾತ್ರ ಗುರುತಿಸಲು
ಸಾಧ್ಯವಾಗುತ್ತದೆ ಎಂದರು.
ಯಾರೂ ಕುಡಿದು ವಾಹನ ಚಲಾಯಿಸಬಾರದು
ವೇಗನಿಯಂತ್ರಣ ವಿರಬೇಕು. ಸಂಚಾರಿ ನಿಯಮಗಳನ್ನು
ಉಲ್ಲಂಘಿಸಿದರೆ
ದಂಡವಿಧಿಸಲಾಗುವುದು. ಅಲ್ಲದೇ ಕಡ್ಡಾಯವಾಗಿ
ವಾಹನಗಳಿಗೆ ವಿಮೆ
ಮಾಡಿಸಬೇಕು.ಚಾಲಕರು ಚಾಲನೆ ಪರವಾನಿಗೆ ಕಡ್ಡಾಯ
ಎಂದು ತಿಳಿಸಿದರು.

