ಹಿರಿಯೂರು: ಐಮಂಗಲ ಪೊಲೀಸರ ಭರ್ಜರಿ ಭೇಟೆ 2
ಕೆಜಿ ಗಾಂಜಾ ವಶ
ಐಮಂಗಲ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ,
ಬೈಕ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಕೆಜಿ 115 ಗ್ರಾಂ ಗಾಂಜಾ
ಸೊಪ್ಪು, 84,600 ರೂಪಾಯಿ ಮೌಲ್ಯದ ಗಾಂಜಾ ಹಾಗೂ 4100
ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಈರಪ್ಪ
ಮತ್ತು ಬೋರಮುತ್ತಿ@ಗುಂಡ ಎಂಬಿಬ್ಬರನ್ನು ಬಂಧಿಸಲಾಗಿದೆ.
ಇಬ್ಬರು ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಗಾಂಜಾವನ್ನು
ಮಾರಾಟ ಮಾಡಲು ಸಣ್ಣ ಪಾಕೇಟ್ ಗಳಲ್ಲಿ ಸಿದ್ಧಪಡಿಸಿ
ಸಾಗಿಸುತ್ತಿದ್ದರು. ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!