ಚಳ್ಳಕೆರೆ :

ಬೆಳಂ ಬೆಳಗ್ಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆಗೆ ಇಡಿ ದಾಳಿ

ಹೌದು ಚಳ್ಳಕೆರೆ ನಗರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನಿವಾಸ ಸೇರಿದಂತೆ ಅಣ್ಣನ ಮನೆ, ಹಾಗೂ ಸಂಬಂಧಿಕರ ಮನೆಗೆ ಇಡಿ ಶಾಕ್ ಕೊಟ್ಟಿದೆ.

ಏಕಕಾಲದಲ್ಲಿ ಸುಮಾರು 17 ಕಡೆ ಶಾಸಕರಿಗೆ ಸಂಬಂಧಿಸಿದ ಆಸ್ತಿ ಮನೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮಿಲಿಟರಿ ಪೋರ್ಸ್ ನೊಂದಿಗೆ ಸ್ಥಳೀಯ ಪೋಲಿಸ್ ರಕ್ಷಣೆ ಮೂಲಕ ಮುಂಜಾನೆ ಶಾಸಕರ ಮನೆಗೆ ದಾಳಿ ಮಾಡಿದ ಇಡಿ ಅಧಿಕಾರಿಗಳು, ಖಾಸಗಿ ವಾಹನಗಳ ಮೂಲಕ ಮನೆ ಸುತ್ತುವರೆದಿದ್ದಾರೆ.

ಇನ್ನೂ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆಯಲ್ಲಿ ಇಲ್ಲವೆಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ಇಡಿ ತನಿಖೆಯ ನಂತರವಷ್ಟೇ ಸಂಪೂರ್ಣ ಮಾಹಿತಿ ಹೊರಬರಲಿದೆ.

About The Author

Namma Challakere Local News
error: Content is protected !!