ಚಳ್ಳಕೆರೆ :
ಚಿತ್ರದುರ್ಗ: ವಿವಿಧ ಬೇಡಿಕೆಗಾಗಿ ಆಶಾ
ಕಾರ್ಯಕರ್ತೆಯರ ಪ್ರತಿಭಟನೆ
ವಿವಿಧ ವೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ
ಕಾರ್ಯಕರ್ತೆಯರು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿ
ಶುಕ್ರವಾರ ಪ್ರತಿಭಟನೆಯನ್ನು ನಡೆಸಿದರು.
ಆಶಾ ಕಾರ್ಯಕರ್ತೆ
ಯರಿಗೆ ಮಾಸಿಕ ವೇತನ 15 ಸಾವಿರ ರೂಪಾಯಿಗಳಿಗೆ
ನಿಗಧಿಪಡಿಸಬೇಕು. ಈಗಾಗಲೇ ಸರ್ಕಾರ ಕೊಟ್ಟ ಮಾತಿನಂತೆ
ನಡೆದುಕೊಳ್ಳುವಂತೆ ಒತ್ತಾಯಿಸಿದರು. ಇದಕ್ಕು ಮುನ್ನ
ನಗರದ ಪ್ರವಾಸಿ ಮಂದಿರದಿಂದ ಎಐಯುಟಿಯುಸಿ
ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಬಂದ ಆಶಾ
ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.