ಚಳ್ಳಕೆರೆ :
ಚಳ್ಳಕೆರೆ: ಮಾದಿಗ ಮಹಾಸಭಾದ ಮುಖಂಡರಿಂದ
ಚಿಕ್ಕಪ್ಪನಹಳ್ಳಿಗೆ ಭೇಟಿ
ಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ ಹೊಸ ವರ್ಷದ
ತಡರಾತ್ರಿ ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸುಟ್ಟ ಘಟನೆ
ನಡೆದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಚಿಕ್ಕಪ್ಪನಹಳ್ಳಿಗೆ
ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ
ಹಾಗು ಮುಖಂಡರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿಯನ್ನು
ಪಡೆದುಕೊಂಡರು.
ನಂತರ ಮಾದಿಗ ಸಮುದಾಯದ ಕುಟುಂಬಗಳ
ಬಗ್ಗೆ ಹಾಗು ಸಂಘಟನೆ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ,
ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಅಂಬೇಡ್ಕರ್ ಗೆ ಜಯಕಾರ
ಹಾಕಿದರು.