ಚಳ್ಳಕೆರೆ : ದಿನನಿತ್ಯ ಕೆಲಸದ ಒತ್ತಡದಲ್ಲಿ ನಿರತರಾದ ಕಂದಾಯ ಅಧಿಕಾರಿಗಳು ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಮಾನಸೀಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟರು

ಅವರು ನಗರದ ಚಿತ್ರದುರ್ಗ ರಸ್ತೆಯ ಹೆಚ್.ಪಿಪಿಸಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ಕಂದಾಯ ಇಲಾಖೆ ಆಯೋಜಿಸಿದಂತಹ ಕಂದಾಯ ನೌಕರರಿಗೆ ಕ್ರಿಕೆಟ್ ಕ್ರೀಡಾಕೂಟದಲ್ಲಿ ಬ್ಯಾಟ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವರ್ಷದ ಅಂತ್ಯದ ದಿನಗಳಲ್ಲಿ ತಾಲೂಕಿನ ಎಲ್ಲಾ ನೌಕರರೆಲ್ಲರೂ ಸೇರಿಕೊಂಡು ಇಂತ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಮಾನಸಿಕವಾಗಿ ಒತ್ತಡವನ್ನು ದೂರ ಮಾಡಬಹುದು, ಆದ್ದರಿಂದ ಇಂತಹ ಕ್ರೀಡಾಕೂಟಗಳಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಭಾಗವಹಿಸುವ ಮುಖೇನ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಕಂದಾಯ ನೌಕರರಿಗೆ ಇಂದು ವಿಶೇಷ ದಿನವಾಗಿದೆ ಪ್ರತಿದಿನ ಸಾರ್ವಜನಿಕರ ಕೆಲಸದಲ್ಲಿ ತಲೀನರಾದಂತಹ ಕಂದಾಯ ನೌಕರರು ವರ್ಷದ ಅಂತ್ಯದಲ್ಲಿ ಬಿಡುವು ಮಾಡಿಕೊಂಡು ಕ್ರೀಡಾ ಆಸಕ್ತಿ ಮೇರೆಗೆ ಇಂದು ಕ್ರೀಡೆಯಲ್ಲಿ ತೊಡಗಿರುವುದು ಸಂತಸ ತಂದಿದೆ ಎಂದರು .

ಇನ್ನು ತಹಶೀಲ್ದಾರ್ ಮಾತನಾಡಿ ತಾಲೂಕಿನ ನಾಲ್ಕು ಹೋಬಳಿಗಳ ಗ್ರಾಮಲೆಕ್ಕಿಗರು ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಎಲ್ಲಾ ಕಂದಾಯ ನೌಕರರು ಹಾಗೂ ಸಿಬ್ಬಂದಿ ವರ್ಗ ಸೇರಿಕೊಂಡು ಇಂತಹ ಕ್ರಿಕೆಟ್ ಟೂರ್ನಿಮೆಂಟ್ ಮೂಲಕ ತಮ್ಮಲ್ಲಿರುವಂತಹ ಕ್ರೀಡಾಮನೋನಭಾವವನ್ನು ವೃದ್ದಿಸಿಕೊಳ್ಳಬೇಕು, ಅದರಂತೆ ತಳಕು ನಾಯಕನಹಟ್ಟಿ, ಪರಶುರಾಮಪುರ ಹಾಗೂ ಕಸಬಾ ಹೋಬಳಿಯ ಎಲ್ಲಾ ಕಂದಾಯ ನೌಕರ ವರ್ಗದವರು ಇಂದು ಕ್ರೀಡಾಕೂಟ ಆಯೋಜಿಸಿರುವುದು ಸಂತಸ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ತಳಕು ಉಪತಾಶಿಲ್ದಾರ್ ರಫಿ ಸಾಬ್, ನಾಯಕನಹಟ್ಟಿ ಉಪ ತಾಶಿಲ್ದಾರ್ ಬಿ. ಶಕುಂತಲಾ, ಪರಸಾಪುರ ಉಪತಾಶಿಲ್ದಾರ್ ಅನ್ನಪೂರ್ಣ, ಹಾಗೂ ಕಂದಾಯ ಅಧಿಕಾರಿ ಲಿಂಗೇಗೌಡ, ನಾಯಕನಹಟ್ಟಿ ಕಂದಾಯ ಅಧಿಕಾರಿ ಚೇತನ್ ಕುಮಾರ್ , ಕಸಬಾ ಕಂದಾಯ ಅಧಿಕಾರಿ ತಿಪ್ಪೇಸ್ವಾಮಿ, ಹಾಗೂ ಗ್ರಾಮಲೆಕ್ಕಿಗರು ತಾಲೂಕು ಕಂದಾಯ ಸಿಬ್ಬಂದಿ ವರ್ಗ , ನಗರಸಭೆ ಅಧ್ಯಕ್ಷರಾದ ಜೈತುನ್ ಬೀ, ಉಪಾಧ್ಯಕ್ಷರಾದ ಸುಮಾ ಭರಮಯ್ಯ, ನಗರಸಭೆ ಸದಸ್ಯರಾದ ರಮೇಶ್ ಗೌಡ, ರಾಘವೇಂದ್ರ, ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ನಗರಸಭೆ ನಾಮ ನಿರ್ದೇಶನ ಸದಸ್ಯರಾದ ವೀರಭದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಸುರೇಶ್ ಕುಮಾರ್,ಮುಖಂಡರುಗಳಾದ ಖಾದರ್, ಅಂಜನಮೂರ್ತಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಕ್ರೀಡಾಪಟುಗಳು, ಉಪಸ್ಥಿತರಿದ್ದರು

About The Author

Namma Challakere Local News
error: Content is protected !!