ವಿಶೇಷ ವರದಿ : ರಾಮುದೊಡ್ಮನೆ ಚಳ್ಳಕೆರೆ


ಚಳ್ಳಕೆರೆ : ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಇರುವ ಇಂದಿರಾ ಕ್ಯಾಂಟಿನ್‌ಗಳಿಗೆ ಮರುಜೀವ ಬಂದAತಾಗಿದೆ ಆದರೆ ಅದ್ಯಾಕೋ ಚಳ್ಳಕೆರೆ ನಗರದಲ್ಲಿ ಇರುವ ಇಂದಿರಾ ಕ್ಯಾಂಟಿನ್‌ನಲ್ಲಿ ಮಾತ್ರ ನಿತ್ಯವೂ ಸಮಸ್ಯೆ ತಲೆದೂರುತ್ತದೆ.

ಹೌದು ನಿಜಕ್ಕೂ ಶೌಚನೀಯ ಈಡೀ ರಾಜ್ಯದಲ್ಲಿ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಕ್ಯಾಂಟಿನ್‌ನಲ್ಲಿ ಇದ್ದ ಊಟದ ಮೆನು ಕೂಡ ಬದಲಾಯಿಸಿ ಬಡ ಜನರಿಗೆ ಸಿಹಿ ಊಟ ನೀಡುವ ಮೂಲಕ ಹಸಿದವರಿಗೆ ಅನ್ನ ನಿಡುತ್ತಿದೆ ಆದರೆ ಇಲ್ಲಿ ಮಾತ್ರ ಬೆರೆಯಾಗಿದೆ.
ಕಳೆದ ಸಾಲಿನಲ್ಲಿ ಇದ್ದ ಊಟದ ಮೆನುವಿನಂತೆ ಕನಿಷ್ಠ ಊಟ ನೀಡುತ್ತಿದ್ದಾರಾದರೂ ಇಲ್ಲಿನ ಸಮಸ್ಯೆ ಬಹಳ, ಇಲ್ಲಿನ ಶೌಚಾಲಯದ ಮಲೀನ ನೀರು ಸರಕಾರಿ ಶಾಲಾ ಆವರಣದಲ್ಲಿ ಹರಿಯುತ್ತಿವೆ ಇನ್ನು ಇದರ ಬಗ್ಗೆ ಶಿಕ್ಷಕರು ಹಲವು ಬಾರಿ ತಿಳಿಸಿದರು ಕೂಡ ಕ್ಯಾರೆ ಎನ್ನದ ನಗರಸಭೆ ಅಧಿಕಾರಿಗಳು ಹಾಗೂ ಇಂದಿರಾ ಕ್ಯಾಂಟಿನ್ ನಿರ್ವಹಕಾರ ನಿರ್ಲಕ್ಷö್ಯಕ್ಕೆ ಆವರಣದಲ್ಲಿ ಮಕ್ಕಳು ನಿತ್ಯವೂ ಗೊಬ್ಬು ವಾಸನೆಯಲ್ಲಿ ಮಲೀನವಾದ ಕೊಚ್ಚೆ ನೀರು ಶಾಲಾ ವರಣದಲ್ಲಿ ನಿಲ್ಲುವುದರಿಂದ ಮೂಗು ಮುಚ್ಚಿಕೊಂಡು ಪಾಠ ಕೇಳುವ ಅನಿವಾರ್ಯತೆ ಎದುರಾಗಿದೆ.
ಇನ್ನೂ ಕಳೆದ ಮೂರು ತಿಂಗಳಿAದ ಈ ಸಮಸ್ಯೆ ಬಿಗಾಡಿಸಿದ್ದರೂ ಕೂಡ ನಗರಸಭೆ ಅಧಿಕಾರಿಗಳು ಜಾಣ ಕುರುಡುತನ ತೋರುವುದರ ಮೂಲಕ ನಮಗೆ ಸಂಬAದವಿಲ್ಲ ಎಂಬAತೆ ಇದ್ದಾರೆ.
ಇನ್ನೂ ಪಕ್ಕದಲ್ಲೆ ಇದ್ದ ಇಂದಿರಾ ಕ್ಯಾಂಟಿನ್ ಹಿಂಗು ಗುಂಡಿ ಕೂಡ ಹೂಳು ತುಂಬಿ ಇಲ್ಲಿ ಮಲೀನವಾದ ನೀರಿನಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ ಇನ್ನು ಇಲ್ಲಿ ನಿತ್ಯವೂ ಗ್ರಾಮೀಣ ಪ್ರದೇಶದಿಂದ ಬಡ ಜನರು ಊಟಕ್ಕೆ ಬಂದರೆ ಮೂಗಿ ಮುಚ್ಚಿಕೊಂಡು ಊಟ ಸೆವಿಸಿ ಹೋಗುವ ಅನಿವಾರ್ಯವಿದೆ.
ಇನ್ನು ಇಂದಿರಾ ಕ್ಯಾಂಟಿನ್ ಮುಂಬಾಗ ನಿರ್ಮಿಸಿದ ಪುಟ್ ಬಾತ್ ಚರಂಡಿ ಡೆಕ್ ಹಾಳಗಿ ದೊಡ್ಡ ಕಂದಕಗಳು ಬಿದ್ದಿವೆ, ಊಟಕ್ಕೆ ಬರುವ ಬಡಜನರು ಬಿಳುವ ಮೊದಲೆ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
ಈಗೇ ಸ್ಥಳೀಯವಾಗಿ ಕಾಂಗ್ರೇಸ್ ಪಕ್ಷದ ಮೂರು ಬಾರಿ ಗೆದ್ದಿರುವ ಶಾಸಕ ಟಿ.ರಘುಮೂರ್ತಿ ಇದ್ದರೂ ಕೂಡ ಇಂದಿರಾ ಕ್ಯಾಂಟಿನ್ ನಿರ್ಲಕ್ಷö್ಯ ಯಾಕೆ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.

ಬಾಕ್ಸ್ :
ಸ್ವಾಮಿ ಕಳೆದ ಮೂರು ತಿಂಗಳಿAದ ಇಂದಿರಾ ಕ್ಯಾಂಟಿನ್‌ನ ಮಲೀನವಾದ ಕೊಚ್ಚೆ ನೀರು ಬಿಡುವುದರಿಂದ ಇಲ್ಲಿನ ಮಕ್ಕಳು ತುಳಿದುಕೊಂಡು ಓಡಾಡುವ ಪರಸಸ್ಥಿತಿ ಇದೆ. ಇಲ್ಲಿ ಮಧ್ಯ ಕುಡಿದ ಬಾಟಲಿಗಳು ಇವೆ, ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೆ ಕ್ಯಾರೆ ಎನ್ನುತ್ತಿಲ್ಲ ಈಗೇ ಬಡಜನರ ಹಸಿವು ನೀಗಿಸುವ ತಾಣ ಅನಾರೋಗ್ಯದ ತಾಣವಾಗಿ ಪರಿಣಸಮಿಸದೆ.– ಸ್ಥಳೀಯ ನಿವಾಸಿ ನಾಗರಾಜ್

ಶಾಲಾ ಆವರಣದಲ್ಲಿ ಕೊಚ್ಚೆ ನೀರು ಹರಿಯುವುದರಿಂದ ಮಕ್ಕಳು ತುಳಿದುಕೊಂಡು ಬರುವ ಅನಿವಾರ್ಯವಿದೆ, ಗೊಬ್ಬು ವಾಸನೆ ಬೀರುತ್ತಿದೆ ಅದಷ್ಟೂ ತುರ್ತಾಗಿ ಸಂಬAದ ಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು.—ಜಕಣಾಚಾರಿ ಮುಖ್ಯ ಶಿಕ್ಷಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

About The Author

Namma Challakere Local News
error: Content is protected !!