ಚಳ್ಳಕೆರೆ : ಪ್ರಸ್ತುತ ನಾಗರೀಕರು, ತಮ್ಮ ಆಸ್ತಿಗಳಿಗೆ ಇ-ಆಸ್ತಿ ನಮೂನೆ -3 ಪಡೆಯುವುದು ದುಸ್ಸಾಹಸವಾಗಿದೆ. ಸಾರ್ವಜನಿಕರಿಗೆ ಅನಗತ್ಯ ಅಲೆದಾಟವನ್ನು ತಪ್ಪಿಸಲು ಪೌರಾಡಳಿತ ನಿರ್ದೇಶಕರಾದ ಮಂಜುಶ್ರೀ ಆರ್. ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಇವರ ಸಹಯೋಗದೊಂದಿಗೆ ಮಹತ್ವದ ಸುಧಾರಣೆ ತರಲು ಮುಂದಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರ ಮತ್ತು ಪೌರಕಾರ್ಮಿಕರ ಸಂಘ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ ಹೇಳಿದ್ದಾರೆ.
ಅಧಿಕೃತ ಮತ್ತು ಅನಧಿಕೃತ ಆಸ್ತಿಗಳಿಗೆ ಇ-ಆಸ್ತಿ ಉತಾರ ಒದಗಿಸಲು ಕ್ರಮ ವಹಿಸುತ್ತಿದ್ದಾರೆ. 2001-02ರ ಪೂರ್ವದಲ್ಲಿ ಡಿ.ಸಿ.ಬಿ. ರಜಿಸ್ಟರ್ ಇತ್ತು. 2002-03 ನಂತರ ಸ್ವಯಂಘೋಷಿತ ಆಸ್ತಿ-ತೆರಿಗೆ ಪದ್ದತಿ ಜಾರಿಗೆ ಬಂದ ಮೇಲೆ ಡಿ.ಸಿ.ಬಿ. ರಜಿಸ್ಟರ ಇಲ್ಲದೇ ಕೆ.ಎಂ.ಎಫ್-24 ಸರಿಯಾಗಿ ನಿರ್ವಹಿಸದೇ ಇದ್ದ ಕಾರಣ ಯಾರು ಎಷ್ಠು ತೆರಿಗೆ ಪಾವತಿಸಿದ್ದಾರೆ, ಎಷ್ಟು ಬಾಕಿ ಇದೆ ಎಂಬುದನ್ನು ಗುರುತಿಸಲಾಗದ ಪರಿಸ್ಥಿತಿಗೆ ನಗರ ಸ್ಥಳೀಯ ಸಂಸ್ಥೆಗಳು ಬಂದಿವೆ.
ಅನಧೀಕೃತ ಕಟ್ಟಡದ ಮಾಲೀಕರಿಗೆ ನಗರ ಸ್ಥಳೀಯ ಸಂಸ್ಥೆಗಳು ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದರೂ ಸಹ, ಅವರಿಂದ ತೆರಿಗೆ ಪಾವತಿಸಿಕೊಳ್ಳಲು ವಿಫಲರಾಗಿದ್ದರು. ಈ ಯೋಜನೆ ಜಾರಿಗೆ ಬಂದ ನಂತರ ಪ್ರತಿಯೊಬ್ಬ ಆಸ್ತಿಗಳ ಮಾಲೀಕರಿಗೂ ವಿಶಿಷ್ಠ ಸಂಖ್ಯೆ ನೀಡಲಿದ್ದು, ತಾಲೂಕು ಕಛೇರಿಗಳ್ಲಿ ಪಹಣಿ ಪಡೆಯುವ ರೀತಿಯಲ್ಲಿ ನಾಗರೀಕರು ಇ-ಆಸ್ತಿ ಉತಾರಗಳನ್ನು ಪಡೆಯಬಹುದಾಗಿರುತ್ತದೆ.
ಈ ಮಹತ್ವದ ಬದಲಾವಣೆ ತರುತ್ತಿರುವ ಪೌರಾಡಳಿತ ನಿರ್ದೇಶಕರಿಗೂ ಹಾಗೂ ಜಂಟಿ ನಿರ್ದೇಶಕರು ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಬೆಂಗಳೂರು ಇವರಿಗೆ ಸಮಸ್ತ ನಾಗರೀಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
ಲಭ್ಯ ಮಾಹಿತಿಯ ಪ್ರಕಾರ, ಕರ್ನಾಟಕ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ “ಆಸ್ತಿ ಕಣಜ” ತಂತ್ರಾAಶದಲ್ಲಿ ಆಸ್ತಿಗಳ ನೋಂದಣಿ ಕೆಲಸವು ಭರದಿಂದ ಸಾಗುತ್ತಿದ್ದು, ಹಗಲು ರಾತ್ರಿ ಎನ್ನದೆ ಎಲ್ಲ ಪೌರ ನೌಕರರು ಶ್ರಮಿಸುತ್ತಿರುವುದು ತಿಳಿದುಬಂದಿದೆ, ಆದರೆ ಅತೀ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು ಅತೀ ಸೂಕ್ಷ್ಮವಾದ ನಾಗರಿಕರ ಆಸ್ತಿಗಳ ವಿವರಗಳನ್ನು ದಾಖಲಿಸುವಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ರಮಾದಗಳಾಗುವ ಸಾಧ್ಯತೆಯಿದ್ದು, ಆದ್ದರಿಂದ ಇವರಿಗೂ ಸಹ ಒತ್ತಡದ ಜೊತೆಗೆ ಸೂಕ್ತ ಕಾಲಾವಕಾಶ ಒದಗಿಸುವುದೂ ಸಹ ಸೂಕ್ತವೆನಿಸುತ್ತದೆ.
ಆಸ್ತಿ ಕಣಜ ತಂತ್ರಾAಶದಲ್ಲಿ ಈಗ ಗಣಕೀಕರಣಗೊಳಿಸುತ್ತಿರುವ ಆಸ್ತಿಗಳ ವಿವರಗಳು, ಸಾರ್ವಜನಿಕರಿಂದ ಕೇವಲ ತೆರಿಗೆ ಸಂಗ್ರಹಿಸಲು ಮಾತ್ರ ಸೀಮಿತವಾಗದೇ, ಸಾರ್ವಜನಿಕರ ಅವಶ್ಯಕತೆಗಳಾದ ಮನೆಯಲ್ಲಿಯೇ ಕುಳಿತು ತೆರಿಗೆ ತುಂಬಲು, ಅವರ ಆಸ್ತಿಯ ನಮೂನೆ -3 ಪಡೆಯಲು, ಆಸ್ತಿ ಮಾಲೀಕತ್ವ ಬದಲಾವಣೆ ಮುಂತಾದ ಸೇವೆಗಳನ್ನು ನಾಗರೀಕರು ಮನೆಯಲ್ಲಿಯೇ ಕುಳಿತು ಪಡೆಯಲು ಶ್ರಮಿಸುತ್ತಿರುವುದು ಸ್ವಾಗತಾರ್ಹ.
ಈ ಹಿಂದೆ ಇದ್ದಂತೆ, ಆಸ್ತಿ ತೆರಿಗೆ ಲೆಕ್ಕ ಹಾಕಲು ಒಂದು ತಂತ್ರಾAಶ, ತೆರಿಗೆ ಪಾವತಿಸಲು ಒಂದು ತಂತ್ರಾAಶ, ಆ ತೆರಿಗೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಒಂದು ತಂತ್ರಾAಶ, ನಮೂನೆ -3 ಪಡೆಯಲು ಮತ್ತೊಂದು ತಂತ್ರಾAಶ ಹೀಗೆ ಪೌರ ನೌಕರರ ಮೇಲೆ ವೃಥಾ ಹೊರೆ ಮಾಡದೇ, ನಾಗರಿಕರಿಗೂ ಕಾಲಹರಣ ವಾಗದೇ ಒಂದೇ ಸೂರಿನಡಿ ಎಲ್ಲ ಸೇವೆ ಸೌಲಭ್ಯಗಳು ದೊರೆಯುವಂತೆ ಒಂದು ಸದೃಢ ವ್ಯವಸ್ಥೆ ಕಲ್ಪಿಸುವ ಪೌರಾಡಳಿತ ನಿರ್ದೇಶಕರನ್ನು ಕೋರುತ್ತೇನೆ ಎಂದಿದ್ದಾರೆ.

About The Author

Namma Challakere Local News
error: Content is protected !!