ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಹೊರ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹ ಹೊಂದಿದೆ.
ನಾಯಕನಹಟ್ಟಿ ದೇವಾಲಯ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಲ್ಲೊAದು ಧಾರ್ಮಿಕ ಪೂಜಾ ಕೈಕಾರ್ಯಗಳು, ಉತ್ಸವಗಳು ಜರುಗುತಿವೆ ಅದರಲ್ಲಿ ಪ್ರತಿ ವರ್ಷದ ಮಾರ್ಚ್ ತಿಂಗಳು ಚಿತ್ತ ನಕ್ಷತ್ರದಂದು ವಾರ್ಷಿಕ ಮಹಾ ಜಾತ್ರೆ ನಡೆಯುತ್ತದೆ.
ನಾಡಿನಾದ್ಯಂತ ಲಕ್ಷಾಂತರ ಭಕ್ತರು ಜಾತ್ರೆಗೆ ಬಂದು ಭಕ್ತ ಭಾವಪರವಶರಾಗಿ ಬೃಹತ್ ರಥೋತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ ಇಂತಹ ಬೃಹತ್ ರಥವನ್ನು ಮಿಣಿ (ಹಗ್ಗ)ದ ಸಹಾಯದಿಂದ ಎಳೆಯಲಾಗುತ್ತದೆ ರಥೋತ್ಸವ ಐತಿಹಾಸಿಕ ಘಟನೆಗೆ ಪ್ರಮುಖ ಕಾರಣವೇ 2 ಬೃಹತ್ ಮಿಣಿ ತಳಕು, ಮನೆಕೋಟೆ ಗ್ರಾಮಸ್ಥರು ಜವಾಬ್ದಾರಿ ಈ ಬೃಹತ್ ಪ್ರಮಾಣದ ಮಿಣಿಯನ್ನು ಸಂಪ್ರದಾಯದAತೆ ಶತಮಾನಗಳಿಂದಲೂ ತಳಕು ಮತ್ತು ಮೊನ್ನೆ ಕೋಟೆ ಗ್ರಾಮಸ್ಥರು ತಯಾರಿಸಿ ಕೊಡುವ ಪ್ರತಿತಿಯಿದೆ ಆದರಂತೆ ಇಂದು ತಳಕು ಮತ್ತು ಮೊನ್ನೆಕೋಟಿ ಗ್ರಾಮಸ್ಥರು ನೂರಾರು ಭಕ್ತರ ಸಮ್ಮುಖದಲ್ಲಿ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಮಿಣಿ ಹಗ್ಗವನ್ನು ಸಮರ್ಪಿಸಿದರು.
ಇದೆ ವೇಳೆ ಎಂವೈಟಿ.ಸ್ವಾಮಿ, ತಿಪ್ಪೆರುದ್ರಣ್ಣ, ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ, ಎಸ್ ಸತೀಶ್, ದಳವಾಯಿ ರುದ್ರಮುನಿ, ಪ್ರಕಾಶ್ ಸೇರಿದಂತೆ ತಳಕು ಮತ್ತು ಮೊನ್ನೆ ಕೋಟೆ ಸಮಸ್ತ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು