ಚಳ್ಳಕೆರೆ : ರಾಜ್ಯ ಸರ್ಕಾರಿ ನೌಕರರ ಸಂಘ ಏಳನೇ ವೇತನ ಆಯೋಗದ ಜಾರಿಗೆ ಹಾಗೂ ಸರ್ಕಾರದಲ್ಲಿ ಬೇಡಿಕೆ ಈಡೇರಿಸುವ ಕುರಿತು ಮಾರ್ಚ್1 ರಂದು ರಾಜ್ಯದ್ಯಾಂತ ಮುಷ್ಕರ ಹಮ್ಮಿಕೊಂಡಿರುವುದರಿAದ ಎಲ್ಲಾ ವೃಂಧದ ನೌಕರರು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಬೆಂಬಲ ಸೂಚಿಸುತ್ತ ಕರ್ತವ್ಯಕ್ಕೆ ಗೈರು ಹಾಜರಾತಿಯಲ್ಲಿ ಮುಷ್ಕರ ಹಮ್ಮಿಕೊಳ್ಳಬೇಕೆಂದು ತಾಲೂಕು ನೌಕರರ ಸಂಘದÀ ಅಧ್ಯಕ್ಷ ಲಿಂಗೇಗೌಡ ಹೇಳಿದರು.
ಅವರು ನಗರದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ನೌಕರರ ಸಂಘದ ಏಳನೇ ವೇತನ ಆಯೋಗ ಶಿಪಾರಸ್ಸಿಗೆ ಒತ್ತಡ ತರಲು ಮುಷ್ಕರ ಹಮ್ಮಿಕೊಳ್ಳುವ ಸಲುವಾಗಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು,
ರಾಜ್ಯ ಸಂಘದ ಆದೇಶದ ಮೇರೆಗೆ ಜಿಲ್ಲಾ ಸಂಘದ ಪರವಾಗಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು ಮತ್ತು ತಾಲೂಕು ಪದಾಧಿಕಾರಿಗಳು ಹಾಗೂ ಶಾಖಾ ಸಂಘಕ್ಕೆ ಕೋರಲಾಗಿದೆ. ಈಗಾಗಲೇ 7ನೇ ವೇತನ ಆಯೋಗದ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಬೆಂಬಲ ಸೂಚಿಸುತ್ತ ಮಾರ್ಚ್ ಒಂದರAದು ಕರ್ತವ್ಯಕ್ಕೆ ಗೈರು ಹಾಜರು ಮುಷ್ಕರಕ್ಕೆ ಬೆಂಬಲ ಕೊಡಬೇಕು ಎಂದರು.
ಇದೇ ಸಂಧರ್ಭದಲ್ಲಿ ಉಪಾಧ್ಯಕ್ಷ ತಿಪ್ಪೆಸ್ವಾಮಿ, ದಯಾನಂದ ರಮೇಶ್, ಆರೋಗ್ಯ ಕುದಾಪುರ ತಿಪ್ಪೆಸ್ವಾಮಿ, ಬಸವರಾಜ್, ಸುದರ್ಶನ, ಸದಾಶಿವಪ್ಪ, ರಾಜ ಕುಮಾರ್, ಮಹಾಲಿಂಗಪ್ಪ, ಸಿಟಿ ವಿರೇಶ್, ಚಂದ್ರಶೇಖರ್, ಸುರೇಶ್, ವೆಂಕಟಲಕ್ಷಿö್ಮ, ಕೃಷಿ ಇಲಾಖೆ ಅಧಿಕಾರಿ ಭಿಮಪ್ಪ, ಎಲ್ಲಾ ವೃಂಧ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.