ಚಳ್ಳಕೆರೆ : ಕಷ್ಟ ವೆಂದರೆ ಮರುಗುವ ಜನನಾಯಕನೆಂದೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ದೀನ ದಲಿತರ ಆಶಾ ಕಿರಣರಾದ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕರಣಿ ಸದಸ್ಯರಾದ ಪಾಪೇಶ್ ನಾಯಕರವರ ಹುಟ್ಟು ಹಬ್ಬದ ಅಂಗವಾಗಿ ಇಂದು ದೊಡ್ಡ ಉಳ್ಳಾರ್ತಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ವಿತರಣೆ ಮಾಡಿದ ನೂರಾರು ಅಭಿಮಾನಿಗಳು ಜನ್ಮ ದಿನಾಚರಣೆ ನಿಮ್ಮಿತ್ತ ಅಭಿಮಾನ ಮೆರೆದಿದ್ದಾರೆ
ಇನ್ನೂ ತಮ್ಮ ಅಭಿಮಾನಿ ಬಳಗದ ನೂರಾರು ಸ್ನೇಹಿತರು ಒಗ್ಗೂಡಿ ತಮ್ಮ ನೆಚ್ಚಿನ ಪಾಪೇಶ್ ನಾಯಕರವರ ಬಗ್ಗೆ ತಮ್ಮ ಅಭಿಮಾನದ ನುಡಿಗಳನ್ನು ಹಾಗಿದ್ದಾರೆ.
ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಜಿಲ್ಲಾ ಪಂಚಾಯತ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾದ ಪಾಪೇಶ್ ನಾಯಕ ನಮ್ಮೂರಿನ ಅಣ್ಣನಾಗಿ ಕಳೆದ ಹಲವು ವರ್ಷಗಳಿಂದ ಬಡ ಜನರ ಬಾಳಿನ ಆಶಾ ಕಿರಣವಾಗಿ ಸದಾ ನಮ್ಮೊಂದಿಗೆ ಇರುವುದು ಸಂತಸ ತಂದಿದೆ ಆದ್ದರಿಂದ ಮುಂದಿನ ಜೀವನ ಸುಖಕರವಾಗಿರಲಿ ದೇವರ ದೀರ್ಘಾಯುಷ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈದೇ ಸಂದರ್ಭದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ರವರ ಆಪ್ತ ಸಹಾಯಕ ಹನುಮಂತರಾಯಪ್ಪ, ದೊಡ್ಡ ಉಳ್ಳಾರ್ತಿ ಗ್ರಾಮದ ಸ್ನೇಹಿತರು ,ಇತರು ಭಾಗವಹಿಸಿದ್ದರು.
ವರದಿ : ರಾಮುದೊಡ್ಮನೆ ಚಳ್ಳಕೆರೆ,
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ
ಪೋ-9740799983