ಚಳ್ಳಕೆರೆ :
ಚಿತ್ರದುರ್ಗ: ಹಿರಿಯ ನಾಗರೀಕರಿಗಾಗಿ 20 ಲಕ್ಷ
ಮೀಸಲು; ಕೆ.ಸಿ ವೀರೇಂದ್ರ
ಪ್ರತಿ ಯಶಸ್ವಿ ವ್ಯಕ್ತಿಗಳ ಹಿಂದೆ ಅವರ ಪೋಷಕರ ತ್ಯಾಗ
ಇರುತ್ತದೆ, ಮಕ್ಕಳ ಏಳಿಗೆಗಾಗಿ ಪೋಷಕರು ತಮ್ಮ ಬದುಕನ್ನೇ
ಮುಡುಪಾಗಿರುತ್ತಾರೆ. ಹೀಗಾಗಿ ಶಾಸಕರ ಅನುದಾನದಲ್ಲಿ
20 ಲಕ್ಷ ಮೊತ್ತವನ್ನು ಹಿರಿಯ ನಾಗರಿಕರಿಗಾಗಿಯೇ
ಮೀಸಲಿಡಲಾಗುವುದೆಂದು ಶಾಸಕ ಕೆ ಸಿ ವೀರೇಂದ್ರ
ಹೇಳಿದರು.
ಚಿತ್ರದುರ್ಗದಲ್ಲಿ ಇಂದು ಹಿರಿಯ ನಾಗರಿಕರ ನೇತೃ
ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಮಕ್ಕಳು ಬೆಳೆದು
ದೊಡ್ಡವರಾದ ನಂತರ ವಯಸ್ಸಾದ ಪೋಷಕರನ್ನು ಎಷ್ಟರಮಟ್ಟಿಗೆ
ನೋಡಿಕೊಳ್ಳುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.