ಚಳ್ಳಕೆರೆ : ಸ್ಮಶಾನದ ವಿವಾದಕ್ಕೆ ಮುಕ್ತಿ ಕಾಣಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಮಲ್ಲೂರ ಹಳ್ಳಿ ಗ್ರಾಮದ ಸರ್ವೆ ನಂಬರ್ 141 ರಲ್ಲಿ ನಾಲ್ಕು ಎಕರೆ 16 ಗುಂಟೆ ಸರ್ಕಾರಿ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕೆ ಕಳೆದ ಐದು ವರ್ಷಗಳ ಹಿಂದೆ ಸರ್ಕಾರದಿಂದ ಮೀಸಲಿರಿಸಲಾಗಿತ್ತು
ಆದರೆ ಈ ಜಮೀನನ್ನು ಗ್ರಾಮಸ್ಥರು ಬಳಸದೇ ಇರುವುದರಿಂದ ಅಕ್ಕಪಕ್ಕದ ಇಡುವಳ್ಳಿಗಾರರು ಒತ್ತುವರಿ ಮಾಡಿಕೊಂಡು ಸ್ವಾಧೀನ ಹೊಂದಿದ್ದರು ಮಲ್ಲೂರಹಳ್ಳಿ ಲಂಬಾಣಿಹಟ್ಟಿ ತಾಂಡಾದ ಶಾರದಾಬಾಯಿ ಇವರು ನಿನ್ನೆ ಮೃತಪಟ್ಟಿದ್ದು ಇವರ ಶವ ಸಂಸ್ಕಾರಕ್ಕೆ ಒತ್ತುವರಿದಾರರು ಅಡ್ಡಿಪಡಿಸಿದ್ದರು ಎನ್ನಲಾದ ಮಾಹಿತಿ ಮೇರೆಗೆ
ಇಂದು ಬೆಳಿಗ್ಗೆ ತಹಶೀಲ್ದಾರ್ ಎನ್ ರಘುಮೂರ್ತಿ ಚಳ್ಳಕೆರೆ ತಾಲ್ಲೂಕು ಮಲ್ಲೂರಹಳ್ಳಿ ಲಂಬಾಣಿಹಟ್ಟಿ ಗ್ರಾಮಕ್ಕೆ ಬೇಟಿ ನೀಡಿ ವಿಷಯದ ಗಂಭೀರತೆಯನ್ನು ಅರಿತ ಕಂದಾಯಾಧಿಕಾರಿಗಳು ನಾಯಕನಹಟ್ಟಿ ಹೋಲಿಸುವ ನಿರೀಕ್ಷಕರಾದ ಶ್ರೀ ಶಿವರಾಜು ಇವರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ತದನಂತರ ವಿವಾದಿತ ಸ್ಮಶಾನದ ಜಾಗಕ್ಕೆ ತೆರಳಿ ಸರ್ವೆಯರ್ ಅವರಿಂದ ಅಳತೆ ಮಾಡಿಸಿ ಜಾಗ ಗುರುತಿಸಿ ಮೃತಳ ಶವಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರು
ಇದೇ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ ಸರ್ಕಾರಿ ಸ್ವಾಮ್ಯದ ಸ್ಮಶಾನ, ಕೆರೆ, ಗೋಮಾಳ ಕರಾಬು, ಹಳ್ಳ ಮತ್ತು ಕೊಳ್ಳಗಳನ್ನು ಯಾರು ಸಹ ಒತ್ತುವರಿ ಮಾಡಕೂಡದು ಒತ್ತುವರಿ ಮಾಡಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕಾಟನಾಯ್ಕ ಮತ್ತು ರಾಜನಾಯ್ಕ ನಾಯಕನಟಿ ಪೊಲೀಸ್ ಪಿಎಸ್ಐ ಶಿವರಾಜ, ಸರ್ವೆ ಅಧಿಕಾರಿ ಪ್ರಸನ್ನಕುಮಾರ್ , ರಾಜಸ್ವ ನಿರೀಕ್ಷಕರು ಚೇತನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು