ಚಳ್ಳಕೆರೆ : ಹಾಲಿನ ಉತ್ಪನ್ನಗಳನ್ನು ಬಳಸುವುದರ ಮೂಲಕ ಗ್ರಾಮೀಣ ಪ್ರದೇಶದ ರೈತರಿಗೆ ನೆರವಾಗಬೇಕು ಎಂದು ಕೆ.ಎಂ.ಎಪ್ ನಿರ್ದೇಶಕ ಸಿ.ವೀರಭದ್ರಬಾಬು ಹೇಳಿದ್ದಾರೆ
ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಮೂರನೇ ಕ್ರಾಸ್ ಬಳಿ ಮಾಲೀಕ ಮಂಜುನಾಥ್ ರವರ ಪ್ರಾರಂಭ ಮಾಡಿದ ನಂದಿನ ಹಾಲು ಹಾಗೂ ಉತ್ಪನ್ನಗಳ ನೂತನ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಯಂ ಉದ್ಯೋಗ ಮಾಡುವ ಮೂಲಕ ಯುವಕರು ಮುಂದೆ ಬರಬೇಕು , ಹಾಲು ಉತ್ಪಾದಕರ ಒಕ್ಕೂಟ ಕರ್ನಾಟಕ ಮಹಾ ಮಂಡಳಿಯಿಂದ ಇಂದು ಜಿಲ್ಲೆಯಲ್ಲಿ ನೂತನವಾಗಿ ಸುಮಾರು7 ನಂದಿನ ಹಾಲು ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಪ್ರಾರಂಭ ಮಾಡಿದ್ದೆವೆ ಎಂದರು.
ಇನ್ನೂ ಕೆಎಂಎಪ್ ವ್ಯವಾಸ್ಥಾಪಕ ನಿರ್ದೇಶಕ ಕೆ.ಎಸ್.ಬಸವರಾಜ್ , ಮಾರುಕಟ್ಟೆ ವ್ಯವಸ್ಥಾಪಕ ಡಾ.ಎಸ್ ಎಂ.ಮೂರ್ತಿ, ಚಿತ್ರದುರ್ಗ ಉಪ ವ್ಯವಸ್ಥಾಪಕ ಸುರೇಶ್ ಗುಳ್ಳಿ, ಮಾರುಕಟ್ಟೆ ಉಸ್ತುವಾರಿ ಎಸ್.ಪಿ.ಲಿಂಗರಾಜ, ಮಾರಾಟ ಮಳಿಗೆ ಮಾಲೀಕ ಮಂಜುನಾಥ್, ಪಾಪಣ್ಣ, ಇತರರು ಪಾಲ್ಗೊಂಡಿದ್ದರು.
ಈದೇ ಸಂಧರ್ಭದಲ್ಲಿ ಕೆ.ಎಂ.ಎಪ್. ನಿರ್ದೇಶಕ ಸಿ.ವೀರಭದ್ರಬಾಬು ಸ್ವತಃ ಅಂಗಡಿಯಲ್ಲಿ ಪೇಡಾ ಖರೀದಿ ಮಾಡುವ ಮೂಲಕ ನೂತನವಾಗಿ ವ್ಯಾಪಾರ ಪ್ರಾರಂಭಿಸಿದರು