ಚಳ್ಳಕೆರೆ :
ಈರುಳ್ಳಿ ಚೀಲ ಖರೀದಿ ವಿಚಾರ ಅಂಗಡಿ ಮಾಲೀಕ ಹಾಗೂ ರೈತನ ನಡುವೆ ವಾಗ್ವಾದ ನಡೆದು ರೈತನ ಮೇಲೆ ಹಲ್ಲೆ ನಡೆದಿರುವ ಘಟನೆ ಜರುಗಿದೆ.
ಅಂಗಡಿ ಮಾಲೀಕ ಹಾಗೂ ರೈತನ ನಡುವೆ ಮಾತಿಗೆ ಮಾತು ಬೆಳೆದು ಈ ವೇಳೆ ಅಂಗಡಿಯ ಮಾಲೀಕನ ಮಗ ರೈತನ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಚಳ್ಳಕೆರೆ ತಾಲೂಕಿನ ಸೂರನಹಳ್ಳಿ ಗ್ರಾಮದ ನರಸಿಂಹಪ್ಪ ಎನ್ನುವ ರೈತ ತಮ್ಮ ಜಮೀನಿನಲ್ಲಿ ಬೆಳೆದ ಈರುಳ್ಳಿ ಸಾಗಾಟಕ್ಕೆ ಈರುಳ್ಳಿ ಚೀಲಕ್ಕಾಗಿ ಚಳ್ಳಕೆರೆ ನಗರದ ಕುಶಾಲ ಸ್ಯಾರಿ ಸೆಂಟರ್ ಅಂಗಡಿಗೆ ಹೋಗಿ ಈರುಳ್ಳಿ ಚೀಲ ಖರೀದಿ ಮಾಡುವ ವಿಚಾರದಲ್ಲಿ ಅಂಗಡಿ ಮಾಲಿಕ ಹಾಗೂ ರೈತ ನರಸಿಂಹಪ್ಪ ನ ನಡುವೆ ಮಾತಿಗೆ ಮಾತು ಬೆಳೆದು ಅಂಗಡಿ ಮಾಲೀಕನ ಮಗ ರೈತನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ ಎಂದು ರೈತ ಪೊಲೀಸ್ ಠಾಣೆ ಮೆಟ್ಟಿಲು ಹೇಳಿದ್ದಾರೆ.
ಚಳ್ಳಕೆರೆ ನಗರದ ಕುಶಾಲ ಸ್ಯಾರಿ ಸೆಂಟರ್ ನಲ್ಲಿ ಈ ಘಟನೆ ನಡೆದಿದ್ದು. ಈ ಸಮಯದಲ್ಲಿ ರೈತ ನರಸಿಂಹಪ್ಪನಿಗೆ ತಲೆಗೆ ಪೆಟ್ಟಾಗಿದ್ದು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಹಲ್ಲೆ ಮಾಡಿದ ಮಾಲೀಕನು ಸಹ ರೈತ ನರಸಿಂಹಪ್ಪ ನ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ..