ಚಳ್ಳಕೆರೆ :
ರಾಜ್ಯದಲ್ಲಿಯೇ ಮೊಟ್ಟ ಮೊದಲಿಗೆ ಬೆಳೆ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದ ಬಯಲು ಸೀಮೆ ಚಳ್ಳಕೆರೆ ತಾಲೂಕಿನ ತಹಶಿಲ್ದಾರ್ ರೇಹಾನ್ ಪಾಷ ರವರ ಸೇವೆಗೆ ಮತ್ತೊಂದು ಕಿರಿಟ ಒಲಿದು ಬಂದಿದೆ.
ಈ ಬಾರಿಯ ಅತ್ಯುತ್ತಮ ಕಂದಾಯ ಅಧಿಕಾರಿ-2024 ರ ಸಾಲಿನಲ್ಲಿ ಇವರಿಗೆ ಸೆ.27 ರಂದು ವಿಕಾಸ ಸೌಧದಲ್ಲಿ ಅಭಿನಂದಿಸಲಾಗುವುದು.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ
ಇಲಾಖೆ ವಿಪತ್ತು ನಿರ್ವಹಣೆ ಬೆಂಗಳೂರು,
ಕಂದಾಯ ಅಧಿಕಾರಿ 2024 ಪ್ರಶಸ್ತಿಗೆ ಆಯ್ಕೆಯಾಗಿದ ತಹಶಿಲ್ದಾರ್ ರೇಹಾನ್ ಪಾಷ ರವರಿಗೆ ಈ
ಪ್ರಶಸ್ತಿಯನ್ನು ಸೆ. 27 ರ ಬೆಳಗ್ಗೆ 10 ಗಂಟೆಗೆ ಕಂದಸಯ ಸಚಿವರ
ಅಧ್ಯಕ್ಷತೆಯಲ್ಲಿ ಕಂದಾಯ ಅಧಿಕಾರಿಗಳ ಸಭೆಯನ್ನು ವಿಕಾಸ ಸೌಧ
ಕೊಠಡಿ ಸಂಖ್ಯೆ 419 ಕಂದಾಯ ಇಲಾಖೆ ಪ್ರಗತಿ ಪರಿಶೀಲನ ಸಭೆಯಲ್ಲಿ
ಪ್ರಶಸ್ತಿಯನ್ನು ನೀಡಲಾಗುವುದು.
ಅತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿರುವ ತಹಶೀಲ್ದಾರ್ ಗೆ ತಾಲೂಕಿನ
ಎಲ್ಲಾ ಕಂದಾಯ ನೌಕರರು, ಸಾರ್ವಜನಿಕರು ಅಭಿನಂಧನೆಗಳನ್ನು ಕೊರಿದ್ದಾರೆ.