ಚಳ್ಳಕೆರೆ ನ್ಯೂಸ್ :
ಕಳೆದ ಹಲವು ವರ್ಷಗಳಿಂದ ಚಳ್ಳಕೆರೆ ನಗರಸಭೆಯಲ್ಲಿ ನೀರು ಸರಬರಾಜು ಸಹಾಯಕರಾಗಿ ಸೇವೆ ಸಲ್ಲಿಸಿದ ತಿಮ್ಮಾರೆಡ್ಡಿ ರವರು ಇಂದು ವಯೋನಿವೃತ್ತಿ ಹೊಂದಿರುವ ಕಾರಣ ಕಚೇರಿಯ ಸಿಬ್ಬಂದಿ ವರ್ಗದಿಂದ ಆತ್ಮೀಯವಾಗಿ ಬೀಳ್ಕೋಟ್ಟರು.
ಹೌದು ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ವೂ ವರ್ಷದ 365 ದಿನಗಳ ಕಾಲ ಬಿಡುವಿಲ್ಲದೆ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸುವ ಕಾಯಕಯೋಗಿ ಎಂದರೆ ತಪ್ಪಾಗಲಾರದು, ಅಂತಹ ವೃತ್ತಿ ಬದುಕಿನಲ್ಲಿ ಅಪಾರವಾದ ಸೇವೆ ಸಲ್ಲಿಸಿದ ಇವರಿಗೆ ಅಭಿಮಾನಿ ಬಳಗದವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಿದರು.
ಇನ್ನೂ ನಗರಸಭೆ ಪೌರಾಯುಕ್ತರಾದ ಜೀವನ ಕಟ್ಟಿ ಮನೆ ಮಾತನಾಡಿ, ನೀರು ಸರಬರಾಜು ಸಹಾಯಕರಾಗಿ ಸೇವೆ ಸಲ್ಲಿಸುವುದು ಅಷ್ಟು ಸುಲಭದ ಮಾತಲ್ಲ ಯಾವುದೇ ರಜಾ ದಿನಗಳು ಇಲ್ಲದೆ ಸಾರ್ವಜನಿಕರ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಸೇವೆ ಸಲ್ಲಿಸುವುದು ಸಾಧನೆಯ ಕಾರ್ಯ, ಅಂತಹ ಸೇವೆಯಲ್ಲಿ ಕಳೆದ ಸುಮಾರು ವರ್ಷಗಳಿಂದ ನೀರು ಸರಬರಾಜು ಸಹಾಯಕರಾಗಿ ಸೇವೆ ಸಲ್ಲಿಸಿ ನಗರದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದರು.
ಇದೇ ಸಂದರ್ಭದಲ್ಲಿ ಚಳ್ಳಕೆರೆ ನಗರ ಸಭೆ ಪೌರಾಯುಕ್ತ ಜೀವನ ಕಟ್ಟಿಮನಿ, ಎಇಇ ವಿನಯ್, ಇಂಜಿನಿಯರ್ ಲೋಕೇಶ್, ಕಚೇರಿ ಅಧಿಕರಾದ ಗುರುಪ್ರಸಾದ್, ವೀರಭದ್ರಪ್ಪ, ಚೇತನ್ ,ತಿಪ್ಪೇಸ್ವಾಮಿ ,ವಿಶ್ವನಾಥ್ ,ರಾಜೇಶ್ , ಸುನಿಲ್, ಗಣೇಶ್, ಮಂಜುನಾಥ್ , ಹಾಗೂ ಅಭಿಮಾನಿ ಬಳಗದವರು ಕಚೇರಿ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು