ಚಳ್ಳಕೆರೆ : ಹೆಲ್ಮೆಟ್ ಧರಿಸಿ ನಿಮ್ಮ ಜೀವನ ರಕ್ಷಿಸಿಕೊಳ್ಳಿ , ನಿಮ್ಮ ನಂಬಿದ ಕುಟುಂಬಕ್ಕೆ ಆಸಾರೆಯಾಗಿ ಎಂದು ಚಳ್ಳಕೆರೆ ಪೊಲೀಸ್ ಠಾಣೆ ಪಿಐ ಕೆ.ಕುಮಾರ್ ಹೇಳಿದರು.
ಅವರು ನಗರದ ಪೊಲೀಸ್ ಠಾಣೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜೀವದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ,
ಆದ್ದರಿಂದ ದಯವಿಟ್ಟು ಎಲ್ಲಾ ಸಾರ್ವಜನಿಕರು ಹೆಲೈಟ್ ಧರಿಸಿ ವಾಹನ
ಚಲಾಯಿಸಬೇಕು ಠಾಣೆ ವ್ಯಾಪ್ತಿಯ ಸುಮಾರು 60 ಹಳ್ಳಿಗಳ ವ್ಯಾಪ್ತಿಯಲ್ಲಿ
ಹತ್ತು ಸಾವಿರ ಕರ ಪತ್ರಗಳನ್ನು ಹಂಚುವ ಮೂಲಕ ಗ್ರಾಮೀಣ
ಭಾಗದಿಂದ ನಗರಕ್ಕೆ ಬರುವಾಗ ಕಡ್ಡಾಯವಾಗಿ ಹೆಲೈಟ್ ಧರಿಸಬೇಕು,
ವಾಹನ ಚಾಲನೆಗೆ ಪರವಾನಿಗೆ, ವಾಹನ ವಿಮೆ ಹಾಗೂ
ದಾಖಲೆಯೊಂದಿಗೆ ಬಂದರೆ ಮಾತ್ರ ವಾಹನ ಬಿಡಲಾಗುವುದು
ಇಲ್ಲವಾದಲ್ಲಿ ನೋಟಿಸ್ ಜಾರಿಮಾಡಿ ವಾಹನಗಳನ್ನು ಜಪ್ತಿ
ಮಾಡಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ವಿದ್ಯಾರ್ಥಿಗಳು ಅತೀವವಾಗಿ ಬೈಕ್ ಹೋಡಿಸುವುದು ಗಮನಕ್ಕೆ ಬಂದಿದೆ,
18 ವರ್ಷದೊಳಗಿನ ಮಕ್ಕಳಿಗೆ ವಾಹನ ನೀಡಿದರೆ ಅಂತಹ ಪೋಷಕರಿಗೆ
ದಂಡವಿಧಿಸುವ ಜತೆಗೆ ವಾಹನ ಜಪ್ತಿ ಮಾಡಲಾಗವುದು. ಶಾಲಾ
ಕಾಲೇಜುಗಳಿಗೆ ಭೇಟಿ ನೀಡಿ 18 ವರ್ಷದೊಳಿಗೆ ಮಕ್ಕಳು ವಾಹನ
ತಂದರೆ ಅಂತಹ ವಾಹಣಗಳನ್ನು ಜಪ್ತಿ ಮಾಡಲಾಗುವುದು ಎಂದು
ಖಡಖ್ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರಮುಖ ಸ್ಥಳೀಗಳಾದ ನೆಹರು ವೃತ್ತ, ಬಳ್ಳಾರಿ ರಸ್ತೆ,
ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳ, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ,
ಸೇರಿದಂತೆ ವಿವಿಧ ಸ್ಥಳಗಲ್ಲಿ ಸಂಚಾರ
ನಿಯಮ ಉಲ್ಲಂಘನೆ ಮಾಡುವ ಆಟೋ ಚಾಲಕರಿಗೆ
ದಂಡವಿಧಿಸಲಾಗುವುದು, ಸಂಚಾರಿ ನಿಯಮ ಪಾಲನೆ ಸಾರ್ವಜನಿಕರಿಗೆ
ಅರಿವು ಮೂಡಿಸಲು ನೆಹರು ವೃತ್ತದಲ್ಲಿ ಧ್ವನಿ
ವರ್ಧಕವನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಸಲ್ಲಿ ಪಿಎಸ್ ಐಗಳಾದ ಸತೀಶ್ ನಾಯ್ಕ, ಧರೆಪ್ಪ ಬಾಳಪ್ಪ,
ಶಿವರಾಜ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.