ಚಳ್ಳಕೆರೆ : ಜನವರಿ 26ರ ಗಣರಾಜ್ಯೋತ್ಸವ ಅಂಗವಾಗಿ ನಗರದ ಸರ್ಕಾರಿ ಕಚೇರಿಗಳು ವಿದ್ಯುತ್ ದೀಪದ ಅಲಂಕಾರಗಳಿಂದ ಕಂಗೊಳಿಸುತ್ತಿವೆ.
ಗಣರಾಜ್ಯೋತ್ಸವ ಕ್ಷಣಗಣನೆಗೆ ಸಿದ್ದತೆಗೊಂಡ ಸರಕಾರಿ ಕಛೇರಿಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿವೆ
ಇನ್ನೂ ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ನೋಡಗರ ಕಣ್ ಮನ್ ಸೇಳೆಯಿತ್ತಿವೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶಿಲ್ದಾರ್ ರೇಹಾನ್ ಪಾಷ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಛೇರಿಗಳು ಇಂದು ದೀಪಾಲಂಕಾರದಿಂದ ವಿಜೃಂಭಣೆಯಿಂದ ಕಾಣುತ್ತಿವೆ.
ಇನ್ನೂ ತಾಲೂಕು ಕಚೇರಿ ನಗರಸಭೆ ಸಬ್ ರಿಜಿಸ್ಟರ್ ಕಚೇರಿ, ರಂಗಮಂದಿರ ಈಗೇ ಹಲವು ಇಲಾಖೆ ಸರಕಾರಿ ಕಛೇರಿಗಳು ದೀಪಾಲಂಕಾರದಿಂದ ಕಾಣುತ್ತವೆ.
ಇದನ್ನು ನೋಡಿದ ದಾರಿಹೋಕರು ಸರಕಾರಿ ಕಛೇರಿಗಳಿಗೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತ ಭಾವನೆಯನ್ನು ಮನದಲ್ಲೆ ತಿಳಿಸುತ್ತ ಮುಂದೆ ಸಾಗುತ್ತರೆ ಎನ್ನಲಾಗಿದೆ.