ರಾಜ್ಯದಲ್ಲಿ ಮೊದಲ ಬಾರಿಗೆ ಚಳ್ಳಕೆರೆಯಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಕೊಕ್ಕೆ
ಹೌದು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲ ವಾಗಲೆಂದು ಐದು ಗ್ಯಾರಂಟಿ ಯೋಜನೆಗಳಲ್ಲಿ ಬಹು ಪ್ರಮುಖವಾದ ಶಕ್ತಿ ಯೋಜನೆ ಜಾರಿಗೆ ತರಲಾಗಿತ್ತು ಆದರೆ ಚಳ್ಳಕೆರೆ ಕೆಎಸ್ ಆರ್ ಟಿಸಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯ ದಿಂದ ಹಳ್ಳ ಹಿಡಿಯುವ ಹಂತಕ್ಕೆ ತಲುಪಿದೆ..
ಬೆಂಗಳೂರು ಹಾಗೂ ಹೊಸಪೇಟೆಗೆ ಸಂರ್ಪಕಿಸುವ ರಾಜ್ಯಹೆದ್ದಾರಿ ನಗರದ ಮಧ್ಯೆ ಭಾಗದಲ್ಲಿ ಹಾದು ಹೋಗಿದ್ದರು ಕೂಡ ಸಾರಿಗೆಗಾಗಿ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನವೀಡಿ ಕಾಯುವ ಪರಿಸ್ಥಿತಿ ನಿರ್ಮಾಣ ವಾಗಿದೆ ಇನ್ನೂ ಅದರಲ್ಲಿ ಶಕ್ತಿ ಯೋಜನೆ ಆರಂಭವಾದ ದಿನದಿಂದ ಈ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಆರೋಪಗಳು ಕೇಳಿ ಬರುತ್ತಿವೆ.ಇದರ ಬಗ್ಗೆ
ಸಾರಿಗೆ ವ್ಯವಸ್ಥಪಕರನ್ನು ಕೇಳಿದರೆ ಉಡಾಫೆಯಿಂದ ಮಾತನಾಡುತ್ತಾರೆ ಎಂಬುದು ಪ್ರಯಾಣಿಕರ ಮಾತಾಗಿದೆ.
ಇನ್ನೂ ನಗರದ ಸಾರಿಗೆ ನಿಲ್ದಾಣಕ್ಕೆ ಕೆಎಸ್ ಆರ್ ಟಿಸಿ ಸಾರಿಗೆ ಬಸ್ ಗಳು ಮಹಿಳಾ ಪ್ರಯಾಣಿಕರನ್ನು ಹತ್ತಿಸದೆ ಅವರಿಗೆ ಸುಳ್ಳು ಮಾಹಿತಿ ನೀಡಿ ಮಹಿಳೆಯರನ್ನು ನಿರ್ಲಕ್ಷ್ಯ ದಿಂದ ಕಾಣುತ್ತಾರೆ.
ಉಚಿತವಾಗಿ ಮಹಿಳೆಯರು ಪ್ರಯಾಣಿಸುತ್ತಾರೆ ಎಂಬ ಮನೋದೋರಣೆಯಿಂದ ಇಲ್ಲಿನ ಕಂಡಕ್ಟರ್ ಹಾಗೂ ಸಿಬ್ಬಂದಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಬಸ್ ಹತ್ತಿಸದೆ ಹೊಗುತ್ತಾರೆ.
ಇನ್ನೂ ಸ್ಥಳದಲ್ಲಿ ಇದ್ದ ವ್ಯವಸ್ಥಾಪಕರಿಗೆ ದೂರು ನೀಡಿದರೆ ಅವರು ಸಹ ಉಡಾಫೆಯಿಂದ ಉತ್ತರಿಸುತ್ತಾರೆ.
ಇನ್ನೂ ನಿಲ್ದಾಣಕ್ಕೆ ಬಂದ ಬಸ್ ಗಳು ಎಂಟ್ರಿ ಕೂಡ ಮಾಡುವುದಿಲ್ಲ ಎಂಬ ಆರೋಪದ ಮಾತುಗಳು ಕೇಳಿ ಬರುತ್ತಾವೆ. ಇದರಿಂದ ಸಬೂಬು ಹೇಳಿ ಸಾರಿಗೆ ನಿಲ್ದಾಣದ ಟಿಸಿ. ನುಣುಚಿಕೊಳ್ಳುತ್ತಾರೆ.
ಒಟ್ಟಾರೆ ಶಕ್ತಿ ಯೋಜನೆಗೆ ರಾಜ್ಯದಲ್ಲಿ ಮೊದಲ ಬಾರಿಗೆ ಸಾರಿಗೆ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ..
ಇನ್ನೂ ನಿಲ್ದಾಣದಲ್ಲಿ
ನಿರ್ವಹಣೆ ಇಲ್ಲದೆ ಕಸದ ರಾಶಿಯ ಜೊತೆಗೆ ಸ್ವಚ್ಚತೆ ಇಲ್ಲದೆ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಇರಬೇಕಾದ ಸ್ಥಿತಿ ಬಂದೊದಗಿದೆ.
ಇನ್ನೂ ಕುಡಿಯುವ ನೀರು ಇಲ್ಲದೆ ನೆಪ ಮಾತ್ರಕ್ಕೆ ಶುದ್ದನೀರಿನ ಘಟಕ ಎನ್ನುವಂತಾಗಿದೆ.
ಇನ್ನಾದರೂ ಇಂತಹ ನಿರ್ಲಕ್ಷ್ಯ ಮನೋದೋರಣೆ ತೋರುವ ಅಧಿಕಾರಿ ಸಿಬ್ಬಂದಿಗಳಿಗೆ ಮೆಲಾಧಿಕಾರಿಗಳು ತಕ್ಕ ಪಾಠ ಕಲಿಸುವರ ಕಾದು ನೋಡಬೇಕಿದೆ.