ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ :- ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ- ವಿಜ್ಞಾನ ಮಾದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ*
ದಿನಾಂಕ 28/10/2023 ರಂದು ಟಾಟಾ ಸೋಲಾರ್ ಪ್ರಯೋಗ ಪ್ರಾಯೋಜಕತ್ವದಲ್ಲಿ ನಡೆದ ರಾಜ್ಯಮಟ್ಟದ ಉರ್ಜಾ ಮೇಳ ವಿಜ್ಞಾನ ವಸ್ತು ಮಾದರಿ ಪ್ರದರ್ಶನ ಹಾಗೂ ಬಿತ್ತಿ ಪತ್ರಗಳ ಮೇಳದಲ್ಲಿ ದೇವರೆಡ್ಡಿಹಳ್ಳಿ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ ಯ ಮಕ್ಕಳು ತಯಾರಿಸಿದ ಸೌರಶಕ್ತಿಯನ್ನು ಬಳಸಿಕೊಂಡು ಯು ಪಿನ್ ಕರ್ವ್ ಗಳಲ್ಲಿ ವಾಹನಗಳ ರಸ್ತೆ ಸುರಕ್ಷತೆಯ ಎಚ್ಚರಿಕೆಯ ಮಾದರಿ ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಟಾಟಾ ಸೋಲಾರ್ ಮೇಳದಲ್ಲಿ ಭಾಗವಹಿಸಲು ಆಯ್ಕೆಯಾಗಿದೆ. ಈ ಪ್ರಯೋಗ ಮಾದರಿಯಲ್ಲಿ ಪ್ರೀತಮ್ ಹಾಗೂ ಪ್ರಿಯಾಂಕ ಮತ್ತು ಅಗಸ್ತ್ಯ ಫೌಂಡೇಷನ್ ಶಿಕ್ಷಕರಾದ ಬಸವೇಶ್ವರ ಹಾಗೂ ಶಾಲೆಯ ಶಿಕ್ಷಕಿ ಯಾದ ಮಮತಾ ದೇವಿ ಮಾರ್ಗದರ್ಶನ ನೀಡಿದ್ದಾರೆ. ಇದಕ್ಕೆ ಶಾಲೆಯ ಮುಖ್ಯ ಶಿಕ್ಷಕರು,ಸಹಶಿಕ್ಷಕರು ಹಾಗೂ SDMC, ಪೋಷಕರು ಅಭಿನಂದಿಸಿದ್ದಾರೆ.
ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸುರೇಶ್ ಕುಮಾರ್,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಳ್ಳಕೆರೆ, ಹಾಗೂ ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಚಿತ್ರದುರ್ಗ ಮತ್ತು ಇತರೆ ಎಲ್ಲ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ..