ಚಳ್ಳಕೆರೆ :
ಮಧ್ಯ ಕರ್ನಾಟಕದ ಆರಾಧ್ಯ ದೇವಿ ಶ್ರೀ ಗೌರಸಮುದ್ರ ಮಾರಮ್ಮ ದೇವಿ ರಾಜ್ಯದ ನಾನ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ದೇವಿ ಭಕ್ತರನ್ನು ಸೆಳೆದಿದ್ದಾಳೆ.
ಇನ್ನೂ ದೇವಿ ದರ್ಶನಕ್ಕೆ ಆಗಮಿಸುವ ಭಕ್ತರು ಗೌರಸಮುದ್ರ ಗ್ರಾಮದ ಪ್ರಮುಖ ಬೀದಿಯಲ್ಲಿ ದೇವಿ ಸನ್ನಿಧಾನಕ್ಕೆ ಹೋಗುವಂತಹ ರಾಜಭೀತಿಯಲ್ಲಿ ಅಕ್ಕಪಕ್ಕದ ನಿವಾಸಿಗಳ ಕೊಳಚೆ ನೀರು ರಸ್ತೆ ಮೇಲೆ ಹರಿಯುವುದರಿಂದ ದೇವಿ ದರ್ಶನಕ್ಕೆ ಕೊಳಚೆ ನೀರು ತುಳಿದುಕೊಂಡೆ ದೇವಿ ದರ್ಶನಕ್ಕೆ ಹೋಗುವ ಅನಿವಾರ್ಯ ಭಕ್ತರ ಪಾಲಿಗೆ ಬಂದಿದೆ.
ಇನ್ನು ವರ್ಷಕ್ಕೊಮ್ಮೆ ನಡೆಯುವ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಕರಿಸುತ್ತಾರೆ ಇಂತಹ ಇತಿಹಾಸ ಪ್ರಸಿದ್ಧ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಗ್ರಾಮಕ್ಕೆ ವ್ಯವಸ್ಥಿತವಾದ ಚರಂಡಿ ಇಲ್ಲದೆ , ರಸ್ತೆ ಇಲ್ಲದೆ, ರಸ್ತೆಯಲ್ಲಿ ಕೊಳಚೆ ನೀರು ಭಕ್ತರು ತಿಳಿದುಕೊಂಡು ಬರುವಂತಹ ಅನಿವಾರ್ಯದ ಪರಿಸ್ಥಿತಿ ಬಂದಿದೆ.
ಇನ್ನು ಈ ಮಾರಮ್ಮ ದೇವಿ ಭಕ್ತರಾದ ಪಕ್ಕದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ , ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಈಗೇ ಅನೇಕ ಜನಪ್ರತಿನಿಧಿಗಳನ್ನು, ರಾಜಕೀಯ ಗಣ್ಯರನ್ನು, ಶಾಸಕರನ್ನು ಸಚಿವರುಗಳನ್ನು ಒಳಗೊಂಡ ಭಕ್ತರನ್ನು ಹೊಂದಿದ ದೇವಿಗೆ ಮೂಲ ಭೂತ ಸೌಲಭ್ಯ ದಿಂದ ವಂಚಿತಳಾಗಿದ್ದಾಳೆ.
ಆದರೆ ದೇವಿ ದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ವ್ಯವಸ್ಥಿತವಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆ ಮೇಲೆ ಹರಿಯುವುದರಿಂದ ಭಕ್ತರು ಮುಜುಗರದಿಂದ ದರ್ಶನಕ್ಕೆ ಬರುವಂತಾಗಿದೆ.
ಇನ್ನು ಕಳೆದ ದಿನಗಳಲ್ಲಿ ದೇವಿ ದರ್ಶನಕ್ಕೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಹಾಗೂ ಕುಟುಂಬ ಸಮೇತ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರೊಟ್ಟಿಗೆ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ಅಡಚಣೆ ಉಂಟಾಗದಂತೆ , ಕೊಳಚೆ ನೀರಿನ ಮುಜುಗರ ಆಗದಂತೆ ರಸ್ತೆ ಆಗಲಿ ಕರಣ, ಚರಂಡಿ ವ್ಯವಸ್ಥೆ ಕಲ್ಪಿಸಲು ತಮ್ಮ ಅನುದಾನವನ್ನು ನೀಡಲು ಇಚ್ಚಿಸಿದ್ದೇನೆ, ಸ್ಥಳೀಯ ಶಾಸಕ ಎನ್.ವೈ.ಗೋಪಾಲಕೃಷ್ಣ ರ ಜೊತೆ ಚರ್ಚಿಸಿ, ಮೂಲ ಭೂತ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದಿದ್ದರು.
ಈಗೇ ಹೇಳಿದಂತಹ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಸದ್ದು ಮಾಡುತ್ತಿದೆ, ಆದ್ದರಿಂದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಗೆ ಮೂಲಭೂತ ಸೌಲಭ್ಯಗಳನ್ನು ಸ್ಥಳೀಯ ಶಾಸಕರು ,ಹಾಗೂ ದೇವಿಯ ಭಕ್ತರು ಕಲ್ಪಿಸುವರ ಎಂಬುದು ಕಾದುನೋಡಬೇಕಾಗಿದೆ.

