ಚಳ್ಳಕೆರೆ :
ಹೊಳಲ್ಕೆರೆ: ಭರಮಸಾಗರ ಕೆರೆ ಸೇರುತ್ತಿರುವ ಕೊಳಚೆ
ನೀರು
ಹೊಳಲ್ಕೆರೆ ಕ್ಷೇತ್ರದ ಐತಿಹಾಸಿಕ ಭರಮಸಾಗರ ಕೆರೆ
ಭರ್ತಿಯಾಗಿದ್ದು, ಇದರ ಜೊತೆಗೆ ಭರಮಸಾಗರದ ಗ್ರಾಮ
ಪಂಚಾಯಿತಿ ಮುಂದಿನ ರಸ್ತೆಯ ಮೂಲಕ ಕೊಳಚೆ ನೀರು ಕೆರೆಯ
ನೀರನ್ನು ಸೇರುತ್ತಿದೆ.
ಒಂದು ಕಡೆಗೆ ಏತನೀರಾವರಿ ನೀರು ಹರಿದು
ಕೆರೆಯನ್ನು ತುಂಬಿದ್ದರೆ, ಇನ್ನೊಂದು ಕಡೆ ಭರಮಸಾಗರದ ಕೊಳಚೆ
ನೀರು ಪೈಪ್ ಗಳ ಮೂಲಕ ಹರಿದು ಕೆರೆಯನ್ನು ಸೇರುತ್ತಿದ್ದು,
ಇದನ್ನು ತಡೆಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.