ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ರವಿ ಮೆಡಿಕಲ್ಸ್ ವತಿಯಿಂದ ನಡೆಸಲಾಯಿತು.
ಇದೆ ವೇಳೆ ರವಿ ಮೆಡಿಕಲ್ಸ್ ಮಾಲೀಕರದ ರವಿ ಮಾತನಾಡಿ ಮಾಡಿದವರಿಗೆ ನೀಡು ಭಿಕ್ಷೆ ಎಂಬ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ವಾಣಿಯಂತೆ ದಾನಗಳಲ್ಲಿ ಶ್ರೇಷ್ಠವಾದ ಅನ್ನದಾನವನ್ನು ಜಾತ್ರೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಶಿಕ್ಷಕ ಮಹಾಂತೇಶ್ ಮಾತನಾಡಿ ರವಿ ಮಾಲಿಕರಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಿರುವುದು ತುಂಬಾ ಸಂತೋಷದ ವಿಷಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಅವರ ಕುಟುಂಬಕ್ಕೆ ಒಳಿತನ್ನ ಬಯಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಬೋರ್ವೆಲ್ಸ್ ಮಾಲೀಕರಾದ ಮಹಾಂತೇಶ್, ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಎಸ್ ಶಿವತಿಪ್ಪೇಸ್ವಾಮಿ, ಚೌಳಕೆರೆ ಶಿವರಾಜ್, ಮಂಜುನಾಥ್ ಟೆಕ್ಸ್ಟೈಲ್ ಮಾಲೀಕ ಕೆ ಜಿ ಮಂಜುನಾಥ್, ಕೆ ಬಸವರಾಜ್ ಜೋಗಿಹಟ್ಟಿ, ಹತಾರ್ ಸಿಟಿ ಫುಟ್ ವೇರ್, ಗಂಗಣ್ಣ ,ನಾಗರಾಜ್ ಗೌರಿಪುರ ಸೇರಿದಂತೆ ಇದ್ದರು