ಬರದನಾಡು ಎಂದು ಹಣೆ ಪಟ್ಟಿಕೊಂಡ ಚಳ್ಳಕೆರೆಯಲ್ಲಿ ಕುಡಿಯುವ ನೀರಿಗೆ, ದನಗಳ ಮೇವಿಗೆ ಬರವಿರಬಹುದು ಆದರೆ ಹಬ್ಬ ಹರಿದಿನಗಳಿಗೆ ಯಾವುದೇ ರೀತಿಯಲ್ಲಿ ಬರವಿಲ್ಲ, ಮಳೆ ಬರಲಿ ಬಿಡಲಿ, ಬಿತ್ತಿದ ಬೆಳೆ ಕೈಗೆ ಸಿಗಲಿ ಬಿಡಲಿ ಆದರೆ

ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಬಹುದೊಡ್ಡ ಜಾತ್ರೆಗಳಲ್ಲಿ ಎರಡನೆ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಗೌರಸಮುದ್ರ ಮಾರಿ ಜಾತ್ರೆ ಇಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಇನ್ನೂ ಎಂದಿನಂತೆ ವಾಡಿಕೆ ಪ್ರಕಾರ ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಗ್ರಾಮ ದೇವತೆ ಗರ್ಭಗುಡಿಯಿಂದ ಹೊರವಲಯದ ತುಮಲಿಗೆ ಆಗಮಿಸಿದ ದೇವತೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಹರಕೆ ಹೊತ್ತು ಚೂರು ಮೆಣಸು, ಕೋಳಿ, ರೈತ ಬೆಳೆದ ಈರುಳ್ಳಿ ದೇವತೆ ಮೇಲೆ ಹಾಕುವ ಮೂಲಕ ಈ ವರ್ಷ ಮಳೆ ಬೆಳೆ ಸಮೃದ್ದಿಯಾಗಿ ಇರಲಿ ಎಂದು ಭಕ್ತಿರು ಹರಕೆ ಹೊತ್ತರು.

ಇನ್ನು ಅಷ್ಟ ದಿಕ್ಕುಗಳಲ್ಲಿ ಸರ್ಪಗಾವಲಿನಂತೆ ಸುತ್ತುವರೆದ ಪೊಲೀಸ್ ಇಲಾಖೆ ಬಿಗಿ‌ಬಂದೋಬಸ್ತ್ ನೀಡುವ ಮೂಲಕ ಯಾವುದೇ ಅಚನಕ ಘಟನೆ ನಡೆಯದಂತೆ ಜಾತ್ರೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇನ್ನೂ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಹೆರಳವಾಗಿದ್ದು ದೇವರ ಕೃಪೆಗೆ ಭಾಜನರಾಗಿದ್ದರು.

ಚಳ್ಳಕೆರೆ ತಾಲೂಕು ಬರದನಾಡು ಎಂದು ಹಣೆ ಪಟ್ಟಿಕೊಂಡ ಚಳ್ಳಕೆರೆಯಲ್ಲಿ ಕುಡಿಯುವ ನೀರಿಗೆ, ದನಗಳ ಮೇವಿಗೆ ಬರವಿರಬಹುದು ಆದರೆ ಹಬ್ಬ ಹರಿದಿನಗಳಿಗೆ ಯಾವುದೇ ರೀತಿಯಲ್ಲಿ ಬರವಿಲ್ಲ, ಮಳೆ ಬರಲಿ ಬಿಡಲಿ, ಬಿತ್ತಿದ ಬೆಳೆ ಕೈಗೆ ಸಿಗಲಿ ಬಿಡಲಿ ಆದರೆ ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಬಹುದೊಡ್ಡ ಜಾತ್ರೆಗಳಲ್ಲಿ ಎರಡನೆ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಗೌರಸಮುದ್ರ ಮಾರಿಹಬ್ಬಕ್ಕೆ ಮಾತ್ರ ಕೊರತೆಬಿಲ್ಲದೆ ಇಲ್ಲಿನ ಭಕ್ತರು ಒಂದು ಪವಾಡದಂತೆ ಜಾತ್ರೆ ಆಚರಿಸಿಕೊಳ್ಳುತ್ತಾರೆ.

ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ.

ಈ ಜಾತ್ರೆಗೆ ವಿಶೇಷವಾದ ಈ ಭಾಗದಲ್ಲಿ ಪ್ರತಿ ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಕರ್ನಾಟಕದಿಂದ, ಆಂಧ್ರಪ್ರದೇಶದವರೆಗೂ ಲಕ್ಷಾಂತರ ಭಕ್ತರನ್ನು ತನ್ನತ ಸೇಳೆಯುವ ಶಕ್ತಿ ಈ ದೇವಿಗಿದೆ ಎನ್ನುತ್ತಾರೆ. ಈ ದೇವಿಗೆ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ.

ಐತಿಹಾಸಿಕ ಹಿನ್ನಲೆ:
ಭಾದ್ರಪದ ಮಾಸದ ಸೆಪ್ಟಂಬರ್ ತಿಂಗಳಲ್ಲಿ ಮಂಗಳವಾರ ನಡೆಯುವ ಮಾರಿ ಹಬ್ಬ ಊರತುಂಬೆಲ್ಲ ಸಡಗರ ಸಂಭ್ರಮ. ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದ ಬಳಿ ಇರುವ ತುಮ್ಮಲು ಎಂಬಲ್ಲಿ ಮಾರಮ್ಮನ ಸಮಾಧಿ ಇದೆ, ಮತ್ತು ಈ ಸಮಾಧಿ ಬಳಿ ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. ಸಮೀಪದ ಪಾಳೆಯಗಾರ ಪಟ್ಟುಗಾಳದ ರಾಯದುರ್ಗ ಹಾಗೂ ನಿಡಗಲ್ಲು ಪಾಳೆಯಗಾರರಿಗೆ ಸಂಬಧಿಸಿದAತೆ ಮಾರಿಯ ಜೀವನದ ಘಟನೆಗಳನ್ನು ಕುರಿತು ನಂಬಲರ್ಹವಾದ ಹಾಗೂ ಆದರ ಪೂರ್ವದಂತ ಕಥೆಗಳು ಇವೆ.

ಈ ದೇವಿಯನ್ನು ಆನಾದಿಕಾಲದಿಂದಲೂ ದುರ್ಗಿ, ಕಾಳಿ, ಮಹೇಶ್ವರಿ, ಇಂತೆಲ್ಲ ಹೆಸರುಗಳಿದ ಮತ್ತು ಮಧ್ಯನ ವೇಳೆ ತನ್ನ ಜಾತ್ರೆಯನ್ನು ಆಚರಿಸುಕೊಳ್ಳುವುದರಿಂದ “ಮಧ್ಯಾನದ ಮಾರಿ” ಎಂತಲು ಕರೆಯುತ್ತಾರೆ. ಮಾರಿ ಮಾನವ ಜನ್ಮದಲ್ಲಿ ಹುಟ್ಟಿ ಸಾಧನೆಯ ಸಿದ್ದಿಪಡೆದು ದೈವತ್ವ ಪಡೆತಿದ್ದಾಳೆ ಎಂಬುದರಲ್ಲಿ ಸಂಶಯವಿಲ್ಲ ಎಂಬುದು ದೃಡನಂಬಿಕೆ.

ಗೌರಸಮುದ್ರ ಊರಿನ ಹಿನ್ನಲೆ”
ಗೌರಸಂದ್ರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲ್ಲೂಕು ಕೇಂದ್ರದಿಂದ ಈಶಾನ್ಯಕ್ಕೆ ೩೦ ಕಿ.ಮೀ ದೂರದಲ್ಲಿದೆ ಗಡಿ ಹಂಚಿಯನಲ್ಲಿ ಆರವತ್ತರ ದಶಕದಲ್ಲಿ ಮಾರಮ್ಮ ಗುಡಿ ಕೇವಲ ಕಾವಡೆ ಹುಲ್ಲಿನ ಗುಡಿಸಲು, ಗುಡಿಯಾಗಿದ್ದು ಈಗ ಊರೊಳಗೆ ಭವ್ಯ ದೇಗುಲವಾಗಿ ಮಾರ್ಪಟಿದೆ. ಈಕೆಯ ಪಕ್ಕದಲ್ಲಿ ಮ್ಯಾಸ ಬೇಡರ ಬೊಮ್ಮಬೇಡರ ಗುಡಿ ಕೂಡ ಇದೆ. ಈ ಗ್ರಾಮವನ್ನು ಹಿಂದೆ ಗೌರಿ-ಚಂದ್ರ, ಎಂದು ಕರೆಯುತ್ತಿದ್ದರು, ಎಂದು ಪ್ರತಿಥಿ ಇದೆ, ಕಾಲ ಕ್ರಮೇಣ ಉಚ್ಚಾರದಲ್ಲಿ ಗೌರ ಚಂದ್ರ, ಗೌರ್ಚಂದ್ರ, ಗೌಸಂದ್ರ, ಗೌರಸಮುದ್ರವಾಯಿತು, ಆನಂತರ ಇತ್ತಿಚೀನ ಸರ್ಕಾರಿ ದಾಖಲೆಗಳ ಪ್ರಕಾರ ಗೌರಸಮುದ್ರ ಎಂದಿದ್ದಾರೆ.

ಇಲ್ಲಿನ ಮಾರಮ್ಮನ ಮೂಲೆ ನೆಲೆ ಗೌರಸಮದ್ರದ ತುಮ್ಮಲು ಎಂಬ ವಿಶಾಲವಾದ ಜಾಗದಲ್ಲಿ ಹುತ್ತದ ರೂಪದಲ್ಲಿ ಸ್ವರೂಪದಲ್ಲಿ ಮಾರಮ್ಮನ ಮೆರೆಮೂರ್ತಿ ಗ್ರಾಮದಲ್ಲಿ ಸಾಮಾನ್ಯವಾಗಿ ಮತ್ತು ಚಳ್ಳಕೆರೆಯಲ್ಲಿ ಕಾಗದ ಮತ್ತು ಬಳೆ ತಯಾರಾಗುತ್ತಿತ್ತು ಈ ಕಾಗದದ ಅಳತೆಗಳು ‘ಗಜ’ ಎಂದು ಹೆಸರಿತ್ತು.

ದೀಪದ ಕಂಬದ ವಿಶೇಷ.:
ಯರಮಂಚನಾಯಕ ಆಗೀನ ಕಾಲದ ದೊರೆಯಾಗಿ ದೇವತೆಯ ಸೇವೆ ಮಾಡುತ್ತಿದ್ದು, ದೇವರ ನಂಬಿಕೆಯ ಪ್ರತೀಕವಾಗಿದೆ. ದೇವಿಯು ಗೌರ ಸಮುದ್ರದಿಂದ ತುಮ್ಮಲುಗೆ ಹೋಗುವ ಹಾದಿಯ ಮಧ್ಯದಲ್ಲಿ ಬಾವುಟ ಇಡಿದು ಮುಂದೆ ಸಾಗಬೇಕು ಮತ್ತು ಈ ತುಮ್ಮಲಿನಲ್ಲಿ ಯರಮಂಚನಾಯಕ ಸುಮಾರು ೨೦ ಅಡಿ ಎತ್ತರದ ಸುಂಧರ ಕಲಾತ್ಮಾಕವಾದ ದೀಪ ಏರಿಸುವ ಕಲ್ಲಿನ ಕಂಬ ನೆಡಿಸಿ (ಸೂರ್ಯನಿಗೆ ನಮಸ್ಕಾರ)ನೀಡಿ ಪವಾಡ ಮೇರೆದ ಈ ಜಾತ್ರೆಯಲ್ಲಿ ಮಾರಿಯ ಹರಕೆ ತೀರಿಸಲು ಭಕ್ತಧಿಗಳು ಬಾಯಿಗೆ ಬಾಯಿ ಬೀಗ ಮತ್ತು ಬೇವಿನ ಸೀರೆ, ಮತ್ತು ಇನ್ನಿತರೆ ಹರಕೆಗಳನ್ನು ತೀರಿಸುತ್ತಾರೆ.

About The Author

Namma Challakere Local News
error: Content is protected !!