ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಪಾವಗಡ ರಸ್ತೆಯಲ್ಲಿರುವು ಆದರ್ಶ ವಿದ್ಯಾಲಯದಿಂದ ಶಾಲೆ ಮುಗಿಸಿಕೊಂಡು ಮರು ವಾಪಸ್ಸ್ ಮನೆಗೆ ಬರುವಾಗ ಐಟಿಐ ಕಾಲೇಜ್ ಸಮೀಪ ಆಟೋ ಪಲ್ಟಿಯಾಗಿ ಇಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಗಾಯಗಳಾದ ಈ ಘಟನೆ ನಡೆದಿದೆ.
ನಗರದ ಆದರ್ಶ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಯಾದ ಶ್ರೀಧರ್, ಹಾಗೂ ವೆಂಕಟೇಶ್ ಎಂಬ ವಿದ್ಯಾರ್ಥಿಗಳು ಆಟೋದಲ್ಲಿ ಪ್ರಯಾಣಿಸುತ್ತಿದ್ದರು, ಆದರೆ ಜಿಟಿಜಿಟಿ ಮಳೆಯಲ್ಲಿ ಆಟೋ ಪಲ್ಟಿಯಾಗಿ ಇಬ್ಬರಿಗೆ ಗಾಯಗಳಾಗಿವೆ, ಗಾಯಗಳಾದ ವಿದ್ಯಾರ್ಥಿಗಳು ಚಳ್ಳಕೆರೆ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ತ್ರಿಚಕ್ರದ ಆಟೋದಲ್ಲಿ ಪ್ರಯಾಣಿಸುವ ಮಕ್ಕಳು ಯಾವುದೇ ಭದ್ರತೆ ಇಲ್ಲದೆ ಈ ಅಪಘಾತಗಳಿಗೆ ಸಿಲಕಬೇಕಾಗಿದೆ. ಇನ್ನೂ ಪಕ್ಕದಲ್ಲೆ ಕೆಎಸ್‌ಆರ್‌ಟಿಸಿ ಸಾರಿಗೆ ಡಿಪೋ ಇದ್ದರು ಕೂಡ ಸಾರಿಗೆ ಸೌಲಭ್ಯ ಎಂಬುದು ಮರೀಚಿಕೆಯಾಗಿದೆ ಎಂದು ಪೋಷಕರಾದ ಲಕ್ಷö್ಮಣ್ ಆರೋಪ ಮಾಡುತ್ತಿದ್ದಾರೆ.
ಅದರಂತೆ ನಗರದ ಆದರ್ಶ ವಿದ್ಯಾಲಯದಲ್ಲಿ ಸುಮಾರು 400 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ, ಅದರಂತೆ ಇಲ್ಲಿ ಯಾವುದೇ ವಾಹನ ಸೌಲಭ್ಯ ಇಲ್ಲದೆ ಇಷ್ಟು ಮಕ್ಕಳು ಖಾಸಗಿ ವಾಹನಗಳು, ಆಟೋ ರೀಕ್ಷಾ, ಟೆಂಪೋ ಹಿಡಿದು ಶಾಲೆಗೆ ದಾವಿಸಬೇಕು ಮತ್ತೆ ಅದೇ ರೀತಿಯಲ್ಲಿ ಮನೆಗೆ ತೆರಳಬೇಕು, ಇನ್ನೂ ಪಾವಗಡ ಮಾರ್ಗವಾಗಿ ಸಂಚರಿಸುವ ಸರಕಾರಿ ಬಸ್‌ಗಳು ನಿಲ್ಲಿಸದೆ ಮಕ್ಕಳು ದಿನವೀಡಿ ಬಸ್ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಅತೀ ವೇಗವಾಗಿ ಸಂಚರಿಸುವ ವಾಹನಗಳಿಗೆ ಸ್ಪೀಟ್ ಬ್ರೇಕರ್ ಇಲ್ಲದೆ ಶಾಲಾ ಆವರಣ ಎಂಬ ಮಾಹಿತಿ ಚಾಲಕರಿಗಿಲ್ಲದೆ ಅತೀ ವೇಗದಲ್ಲಿ ವಾಹನ ಚಾಲಾಯಿಸುತ್ತಿದ್ದಾರೆ. ಇನ್ನೂ ಹಲವು ಬಾರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರು ಲೋಕಪಯೋಗಿ ಇಲಾಖೆಗೆ ಮನವಿ ನೀಡಿದರೂ ಕ್ಯಾರೆ ಎನ್ನುತ್ತಿಲ್ಲವಂತೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ಆರೋಪಿಸಿದ್ದಾರೆ.
ವಾಹನ ಸೌಲಭ್ಯ ಮರಿಚೀಕೆ : ವಿದ್ಯಾರ್ಥಿಗಳ ಪರದಾಟ
ಚಳ್ಳಕೆರೆ ನಗರದಲ್ಲಿ ದಿನವೊಂದಕ್ಕೆ ಸಾವಿರಾರು ವಿದ್ಯಾರ್ಥಿಗಳು ಶಾಲಾ ಕಾಳೇಜುಗಳಿಗೆ ತೆರಳುತ್ತಾರೆ, ಆದರೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಇಂತಹ ಅಪಘಾತಗಳಿಗೆ ಸಿಲುಕಬೇಕಿದೆ. ಬಯಲು ಸೀಮೆಯಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದ ಜನಪ್ರತಿನಿಧಿಗಳ ಇತಾಸಕ್ತಿಯಂತೆ ಆದರ್ಶ ಶಾಲೆ, ಮೋರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಸರಕಾರಿ ಐಟಿಐ ಕಾಲೇಜು, ಇಂಜಿನಿಯಾರ್ ಕಾಲೇಜ್, ಜಿಟಿಟಿಸಿ ಕೇಂದ್ರ, ಹೆಚ್.ಪಿಪಿಸಿ ಪ್ರಥಮ ದರ್ಜೆ ಕಾಲೇಜ್, ಸರಕಾರಿ ಪದವಿ ಕಾಲೇಜ್, ಬಿಸಿನೀರು ಮುದ್ದಪ್ಪ ಪ್ರೌಢಶಾಲೆ, ಹೆಗ್ಗೆರೆ ತಾಯಮ್ಮ ಶಾಲೆ ಈಗೇ ವಿದ್ಯಾರ್ಥಿಗಳು ಆಗಮಿಸುತ್ತಾರೆ.
ಬಾಕ್ಸ್ :
ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ ಆದರೆ ನಗರದ ಸುಮಾರು ಐದರಿಂದ ಹತ್ತು ಕಿಲೋಮೀಟರ್ ತ್ರೀಜ್ಯ ಹೊಂದಿದ ನಗರ ವಿಶಾಲವಾಗಿ ಹಬ್ಬಿದೆ ಅದರಂತೆ ಸಿಟಿ ಬಸ್ ಸೌಲಭ್ಯ ಅಗತ್ಯವಾಗಿದೆ, ಸಿಟಿಬಸ್ ಸೌಲಭ್ಯದಿಂದ ಈ ಎಲ್ಲಾ ಶಾಲಾ ಕಾಲೇಜ್‌ಗಳಿಗೆ ವಿದ್ಯಾರ್ಥಿಗಳಿಗೆ ತೆರಳಲು ಅನುಕೂಲವಾಗುತ್ತದೆ.
—ಅಶೋಕರೆಡ್ಡಿ ಮುಖ್ಯ ಶಿಕ್ಷಕರು ಆದರ್ಶ ಶಾಲೆ

Namma Challakere Local News
error: Content is protected !!