ಅನುಭವಿ ಉಪನ್ಯಾಸಕರು ನೇಮಿಸುವಂತೆ ಒತ್ತಾಯ
ಕಾಲೇಜು ವಿರುದ್ಧ ಸ್ಥಳೀಯ ಶಾಸಕರಿಗೆ ಮನವಿ

ಚಳ್ಳಕೆರೆ : ನಗರದ ವಾಸವಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ಒಳ ಜಗಳಕ್ಕೆ ವಿದ್ಯಾರ್ಥಿಗಳು ಹೈರಾಣಗಿದ್ದಾರೆ.
ಇನ್ನೂ ಆಡಳಿತ ಮಂಡಳಿಯ ಖಾರ್ಯ ವೈಖರಿಗೆ ವಿದ್ಯಾರ್ಥಿಗಳು ಬೇಸತ್ತು ಸ್ಥಳೀಯ ಶಾಸಕರಿಗೆ ಮನವಿ ನೀಡಿರುವುದು ಕಂಡು ಬಂದಿದೆ.
ವಿದ್ಯಾರ್ಥಿಗಳ ನೀಡಿದ ಮನವಿಯಲ್ಲಿ ಕಾಲೇಜಿನ ಶೈಕ್ಷಣಿಕ ಅಭಿವೃದ್ದಿ ಕುಂಠಿತವಾಗಿದೆ ಕೇವಲ ಇನ್ನೂ ಮುರು ತಿಂಗಳು ಪರೀಕ್ಷೆ ಇರುವಾಗ ಕಾಲೇಜಿನ ಅನುಭವಿ ಉಪನ್ಯಾಸಕರನ್ನು ತೆಗೆದು ಹಾಕಿ ಹೊಸ ಪಿಯುಸಿ ತರಗತಿಗಳಿಗೆ ಪಾಠ ಮಾಡುವ ಉಪನ್ಯಾಸಕರನ್ನು ನೇಮಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ
ಇನ್ನೂ ಕೇಲವೇ ದಿನಗಳಲ್ಲಿ ಪರೀಕ್ಷೆ ಸಮಿಪಿಸುತ್ತಿದೆ ಇಂತಹ ಸಂದ್ಗಿದ ಪರಸ್ಥಿತಿಯಲ್ಲಿ ಆಡಳಿತ ಮಂಡಳಿ ನಿರ್ಧರಕ್ಕೆ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ವಿದ್ಯಾರ್ಥಿಗಳ ಅಳಲನ್ನು ಆಲಿಸಿ ಸಂಸ್ಥೆ ಅಧ್ಯಕ್ಷರಿಗೆ ದೂರವಾಣಿ ಮೂಲಕ ಕರೆ ಮಾಡಿದರೆ ಸ್ವೀಕರಿಸದೆ ಇರುವುದರಿಂದ ಪ್ರಾಶುಂಪಾಲರಿಗೆ ಕರೆ ಮಾಡಿ ವಿಧ್ಯಾರ್ಥಿಗಳ ಅಳಲನ್ನು ವ್ಯಕ್ತಪಡಿಸಿದರು.
ಇನ್ನೂ ಕೆಲವೆ ದಿನಗಳಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕರು ಭರಸೆ ನೀಡಿದರು.

ವಿದ್ಯಾರ್ಥಿನಿಯೊಬ್ಬರು ಮಾತನಾಡಿ, ಕಾಲೇಜಿನ ಕಾಮರ್ಸ್ ವಿಭಾಗದ ಆರು ಉಪನ್ಯಾಸಕರು ಏಕಕಾಲಕ್ಕೆ ರಾಜೀನಾಮೆ ನೀಡಿದ್ದಾರೆ, ವಿದ್ಯಾರ್ಥಿಗಳು ಕೇಳಿದರೆ ಸಮಾಧಾನಕರ ಉತ್ತರ ನೀಡದೆ, ಅವರಿಗೆ ಬೇಕಾದ ತೀರ್ಮಾನವನ್ನಷ್ಟೇ ಹೇಳಿ ಹೊಸ ಉಪನ್ಯಾಸಕರುಗಳನ್ನು ನೇಮಕ ಮಾಡಿರುತ್ತಾರೆ. ಅವರು ಪಾಠ ಮಾಡುವುದು ಅರ್ಥ ವಾಗುತಿಲ್ಲ ಮತ್ತು ಬಂದಿರುವ ಉಪನ್ಯಾಸಕರು ಪಿ.ಯು.ಸಿ.ಗೆ ಪಾಠ ಮಾಡಿದ ಅನುಭವವಿದೆಯಂತೆ. ಪದವಿ ತರಗತಿಗಳಿಗೆ ಪಾಠ ಮಡಿದ ಎಕ್ಸ್ ಪಿರಿಯನ್ಸ್ ಇಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇದು ತುಂಬಾ ಮುಖ್ಯ ಘಟ್ಟವಾಗಿದೆ.
ಆದ್ದರಿಂದ ನಮಗೆ ಹಳೆಯ ಉಪನ್ಯಾಸಕರುಗಳು ಬೇಕು. ನಮಗೆ ತರಗತಿಗಳು ಯಥಾಪ್ರಕಾರ ನಡೆಯುವಂತೆ ಮಾಡಿಕೊಡಿ ಎಂದು ಅಳಲು ತೋಡಿಕೊಂಡರು.

About The Author

Namma Challakere Local News

You missed

error: Content is protected !!