ಚಳ್ಳಕೆರೆ : ಬರಪೀಡಿತ ಪ್ರದೇಶ ಎಂಬ ಅಣೆ ಪಟ್ಟಿಯನ್ನು ಹೋಗಲಾಡಿಸಿದ ಶಾಸಕ ಟಿ. ರಘುಮೂರ್ತಿಗೆ ನಮ್ಮ ಭಾಗದ ದೇವರು ಅವರು ಎರಡು ಭಾರಿ ಶಾಸಕರಾಗಿ ನೀರಾವರಿ ಭಾಗ್ಯ ತಂದಿರುವುದು ಹೆಮ್ಮೆಯ ವಿಷಯ ಎಂದು ಅಖಂಡ ಕರ್ನಾಟಕ ರಾಜ್ಯ ಸಂಸ್ಥಾಪನಾ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಪರುಶುರಾಂಪುರ ಗ್ರಾಮದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರದಮಲ್ಲಿ ಮಾತನಾಡಿದರು,
ರೈತಪರ ಕಾಳಜಿಯನ್ನ ಹೊಂದಿರುವ ರೈತನಾಯಕ ಬರಗಾಲದಲ್ಲಿ ವೇದಾವತಿ ನದಿಗೆ ನೀರನ್ನು ಹರಿಸಿದ ಆಧುನಿಕ ಭಗೀರಥ ರೈತಮಿತ್ರ ಶಾಸಕ ಟಿ.ರಘುಮೂರ್ತಿ ಯವರ ಪರಿಶ್ರಮಕ್ಕೆ ಈಡೀ ಕ್ಷೇತ್ರ ನೆಮ್ಮದಿಯಾಗಿದೆ.
ಕ್ಷೇತ್ರದ ಶಾಸಕರಾಗಿ 10 ವರ್ಷಗಳ ಅವಧಿಯಲ್ಲಿ ವೇದಾವತಿ ನದಿಗೆ ಬ್ಯಾರೇಂಜ್, ಬ್ರಿಜ್ ಕಂಬ್ಯಾರೇಜ್, ನಿರ್ಮಿಸಿ ಮಳೆಗಾಲದಲ್ಲಿ ಮಾತ್ರ ವೇದಾವತಿ ನದಿಯಲ್ಲಿ ನೀರು ಕಾಣುವಂತಹ ಪರಿಸ್ಥಿತಿಯಲ್ಲಿ ವಾಣಿವಿಲಾಸ ಸಾಗರದಿಂದ ನೀರು ಹರಿಸುವ ಮೂಲಕ ಸದಾ ನೀರನ್ನು ನೋಡುವಂತಾಗಾಗಿ ಅಂತರ್ಜಲ ಹೆಚ್ಚಳದಿಂದ ರೈತರ ಕೊಳವೆಬಾವಿಗಳಲ್ಲಿ ನೀರು ಹೆಚ್ಚಾಗಿ ಈಗ ರೈತರು ಅಡಿಕೆ, ತೆಂಗು ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುವಂತೆ ಮಾಡಿ ಬರಪೀಡಿತ ಪ್ರದೇಶ ಎಂಬ ಅಣೆಪಟ್ಟಿಯಿಂದ ದೂರ ಮಾಡಿದ್ದಾರೆ.
ಇನ್ನೂ ಸರಕಾರಿ ಇಂಜಿನಿಯರಿAಗ್ ಕಾಲೇಜ್, ಜಿಟಿಟಿಸಿ ಕೇಂದ್ರ, ಸಾರಿಗೆ ಬಸ್ ನಿಲ್ದಾಣ, ಸಾರಿಗೆ ಡಿಪೋ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿ , ಕುಡಿಯುವ ನೀರು, ವಸತಿ, ಸ್ಮಶಾನ ಅಭಿವೃದ್ಧಿ, ಸೇರಿಂತೆ ಸಾಕಷ್ಟು ಅಭಿವೃದ್ದಿ ಮಾಡಲಾಗಿದೆ ಈಗೇ ಹತ್ತು ಹಲವು ಕಾರ್ಯಗಳನೊಳಗೊಂಡ ಇವರಿಗೆ ಅಭಿನಂದನೆ ಸಲ್ಲಿಸುವುದು ಸಂತಸ ತಂದಿದೆ ಎಂದರು.

ಇನ್ನೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಕಳೆದ ಹತ್ತು ವರ್ಷಗಳಲ್ಲಿ ರೈತ ಪರವಾದ ಅಭಿವೃಧ್ದಿ ಮಾಡಿದ್ದೆನೆ ಅದರಂತೆ ಈಡೀ ಕ್ಷೇತ್ರದಲ್ಲಿ 2013ರ ಹಿಂದೆ ಎಲ್ಲಿ ನೋಡಿದರೂ ಒಣ ಭೂಮಿ ಇದರಿಂದ ಚಳ್ಳಕೆರೆ ಜನರು ಉದ್ಯೋಗ ಹರಸಿ ಬೆಂಗಳೂರು, ಹೈದರಾಬಾದ್ ಈಗೇ ನಗರ ಪಟ್ಟಣ ಸುತ್ತಾಟ ನಡೆಸುತ್ತಿದ್ದರು, ಇನ್ನೂ ವಿಪರೀತ ಬರಗಾಲ ಕುಡಿಯುವ ನೀರಿಗೂ ಪರದಾಡುವ ಪರಸ್ಥಿತಿ ಇದನ್ನು ಮನಗಂಡು, ಸರಕಾರದಲ್ಲಿ ಕಸರತ್ತು ನಡೆಸಿ ಈಡೀ ಬಯಲು ಸೀಮೆಗೆ ನೀರುಣಿಸುವ ಮಹತ್ವದ ಯೋಜನೆಗೆ ತಾಲೀಮು ನೆಡೆಸಿ ವೇದಾವತಿ ನದಿ ಪಾತ್ರದ ಮೂಲಕ ಚಳ್ಳಕೆರೆಗೆ ಕುಡಿಯುವ ನೀರು ಹಾಗೂ ರೈತರ ಜಮೀನುಗಳ ಬೋರ್‌ವೆಲ್ ರೀಚಾಜ್‌ಗೆ ಅನುಕೂಲವಾಗಿದೆ ಇನ್ನು ಕ್ಷೇತ್ರದಲ್ಲಿ ಶಿಕ್ಷಣಕ್ಕೆ, ರೈತರಿಗೆ, ಹಾಗೂ ನಿರುದ್ಯೋಗಿಗಳಿಗೆ, ಉದ್ಯೋಗ ನೀಡುವ ಮೂಲಕ, ದೇಶಕ್ಕೆ ಅನ್ನ ನೀಡುವ ರೈತನಿಗೆ, ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಸಾರ್ವಜನಿಕರ ಕುಂದು ಕೊರೆತೆಗಳಲ್ಲಿ ಬಾಗಿಯಾಗಿ ಎರಡು ಅವಧಿಯಲ್ಲಿ ಜನರ ಸೇವೆಯಲ್ಲಿ ಬಾಗಿಯಾಗಿದ್ದೆನೆ ಎಂದರು.

ಇನ್ನೂ ಹಲವು ರೈತ ಮುಖಂಡರು ಬಾಗಿಯಾಗಿದ್ದಾರು.

About The Author

Namma Challakere Local News
error: Content is protected !!