ಚಳ್ಳಕೆರೆ : ಗೋಪನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದಲ್ಲಿ ಫೆ.9ರಂದು ಬೆಳ್ಳಿಗ್ಗೆ 10ಕ್ಕೆ ಅಸ್ಪೃಶ್ಯತೆ ನಿವಾರಣ ಕಾರ್ಯಕ್ರಮವನ್ನು ಆಮ್ಮಿಕೊಳ್ಳಲಾಗಿದೆ, ನಂತರ ಸಂಜೆ 4ಗಂಟೆಗೆ ಚಳ್ಳಕೆರೆ ನಗರದ ಜನತಾ ಕಾಲೋನಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗದಲ್ಲಿ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ತಾಲೂಕಿನ ಎಲ್ಲಾ ದಲಿತಪರ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು, ದಲಿತ ಸಮಾಜದ ಮುಖಂಡರುಗಳು ಹಾಗೂ ದಲಿತ ಜನಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಮಂಜುನಾಥ್ ಪ್ರಕಟಣೆಯಲ್ಲಿ ಕೋರಿದ್ದಾರೆ.