ಚಳ್ಳಕೆರೆ : ದೇಶಿಯ ಸಂಸ್ಕೃತಿಗಳು ಮತ್ತು ಧಾರ್ಮಿಕರಾಧನೆಗಳು ಸಮಾಜದಲ್ಲಿನ ಶಾಂತಿ ಮತ್ತು ನೆಮ್ಮದಿಗೆ ಪೂರಕವಾದಂತ ಬೆಳವಣಿಗೆಗಳಾಗಿವೆ, ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಬುಡಕಟ್ಟು ಸಂಸ್ಕೃತಿಗಳು ಚಿತ್ರದುರ್ಗ ಜಿಲ್ಲೆಯಲ್ಲಿ ನೆರೆಯೂರಿವೆ, ಒಂದು ಕಡೆ ಮ್ಯಾಸಬೇಡರ ಬುಡಕಟ್ಟು ಸಂಸ್ಕೃತಿ ಇನ್ನೊಂದು ಕಡೆ ಕಾಡು ಗೊಲ್ಲರ ಆರಾಧನಾ ಸಂಸ್ಕೃತಿ ಈ ಎರಡು ಜನಾಂಗಗಳ ಸಂಸ್ಕೃತಿಗಳು ಮತ್ತು ದೈವಿಕ ಆರಾಧನೆಗಳು ಒಂದಕ್ಕೊAದು ಸಾಮ್ಯವಿದ್ದು ಇದರಿಂದಲೇ ಈ ಜಿಲ್ಲೆಯಲ್ಲಿ ಅತಿ ಹೆಚ್ಚು ಶಾಂತಿ ಮತ್ತು ನೆಮ್ಮದಿ ಲಭಿಸಿದ್ದು. ಕಾನೂನು ಮತ್ತು ಸುವ್ಯವಸ್ಥೆಗೆ ಸಹಕಾರಿಯಾಗಿದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಹಾಯ್ಕಲ್ ನಿಂದ ಚಳ್ಳಕೆರೆ ತಾಲೂಕಿನ ದೊಡ್ಡೆರಿ ಗ್ರಾಮಕ್ಕೆ ಗಂಗಾಪೂಜೆಗೆ ಆಗಮಿಸಿದ ಗಾದ್ರಿ ಪಾಲನಾಯಕ ಬುಡಕಟ್ಟು ಸಂಸ್ಕೃತಿಯ ಮೆರವಣಿಗೆಯಲ್ಲಿ ನಗರದ ನೆಹರು ವೃತ್ತದಲ್ಲಿ ಸ್ವಾಮಿ ಕೃಪೆಗೆ ಪಾತ್ರರಾಗಿ ನಂತರ ದೇವರನ್ನು ಉದ್ದೇಶಿ ಮಾತನಾಡಿದ ಅವರು
ಜಿಲ್ಲೆಯ ಈ ತಾಲೂಕುಗಳಲ್ಲಿ ಅದೆಷ್ಟೇ ಅನಕ್ಷರತೆ ಮತ್ತು ಬಡತನ ಇದ್ದಾಗೆಯೂ ಕೂಡ ಆಚಾರ ವಿಚಾರ ಮತ್ತು ಸಂಸ್ಕೃತಿಗಳಲ್ಲಿ ಈ ಜನರು ಶ್ರೀಮಂತವಾಗಿದ್ದಾರೆ ಪರಸ್ಪರ ಸಾಮರಸ್ಯ ಸಹಬಾಳ್ವೆ ಮತ್ತು ಪರೋಪಕಾರವಂತ ಮಾನವೀಯ ಗುಣಗಳು ಪ್ರತಿಯೊಬ್ಬರಲ್ಲೂ ಮನೆ ಮಾಡಿವೆ ಇಂಥ ವೈಶಿಷ್ಟ್ಯ ಪೂರ್ಣವಾದಂತ ಆಚರಣೆಗಳು ಮತ್ತು ಮಾನವೀಯ ಗುಣಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಮುಂದಿನ ಯುವ ಪೀಳಿಗೆಯೂ ಕೂಡ ಈ ಸಂಸ್ಕೃತಿಗಳನ್ನ ಮುಂದುವರಿಸ್ಕೊAಡು ಹೋಗುವುದು ಅಗತ್ಯವಾಗಿದೆ.
ಈ ಸಂಸ್ಕೃತಿ ಆಚರಣೆ ಜೊತೆಗೆ ಈ ಸಮುದಾಯಗಳು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಮತ್ತು ರೈತರುಗಳು ಕೂಡ ವೈಜ್ಞಾನಿಕ ಮತ್ತು ತಾಂತ್ರಿಕ ಕೃಷಿಗಳನ್ನು ಅಳವಡಿಸಿಕೊಂಡು ಉತ್ಕೃಷ್ಟವಾದ ಬದುಕನ್ನು ರೂಪಿಸಿಕೊಂಡಾಗ ಮಾತ್ರ ಸಾಮಾಜಿಕವಾಗಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಆಗಿ ಸಮುದಾಯಗಳು ತಮ್ಮ ಬದುಕಿನಲ್ಲಿ ಹೊಸ ಭಾಷ್ಯೆಯನ್ನು ಬರೆಯಬೇಕೆಂದು ಆಶಿಸಿದರು.
ನೂರಾರು ಬಂಡಿ ಗಾಡಿಯಲ್ಲಿ ದೇವತೆಗಳನ್ನು ಕೂರಿಸಿಕೊಂಡು ಬುಡಕಟ್ಟು ಸಂಸ್ಕೃತಿಯ ಮೆರವಣಿಗೆಯಲ್ಲಿ ದೇವರ ಎತ್ತುಗಳನ್ನು ಪೂಜಿಸಿಕೊಂಡು ಭಕ್ತಿ ಭಾವ ಪರವಶರಾಗಿ ಗಾದ್ರಿಪಾಲ ನಾಯಕ ದೇವರನ್ನು ಆರಾಧಿಸಿದರು.
ಈ ಸಂದರ್ಭದಲ್ಲಿ ಶಶಿಧರ್‌ರೆಡ್ಡಿ, ದೇವರಾಜ್‌ರೆಡ್ಡಿ, ಕ್ಯಾಸಕ್ಕಿ ಪಾಪಯ್ಯ, ಸಹಸ್ರರು ಭಕ್ತಾದಿಗಳು ಉಪಸ್ಥಿತರಿದ್ದರು