ಮಹರ್ಷಿ ವಾಲ್ಮೀಕಿಯ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು : ತಹಶಿಲ್ದಾರ್ ಎನ್ ರಘುಮೂರ್ತಿ ಕರೆ
ಚಳ್ಳಕೆರೆ : ರಾಷ್ಟ್ರಪ್ರೇಮ, ತ್ಯಾಗ ಮತ್ತು ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ವಾಲ್ಮೀಕಿ ನಾಯಕ ಸಮಾಜ ಹಾಗಾಗಿ ಈ ಸಮಾಜದ ಪ್ರತಿ ಒಬ್ಬರು ಕೂಡ ದೇಶಪ್ರೇಮ ತ್ಯಾಗ ಮತ್ತು ಸ್ವಾಭಿಮಾನವನ್ನು ಮೈ ಗೂಡಿಸಿಕೊಳ್ಳಬೇಕೆಂದು ತಹಶಿಲ್ದಾರ್ ಎನ್ .ರಘುಮೂರ್ತಿ ಕರೆ ನೀಡಿದರು
ಅವರು ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ವಾಲ್ಮೀಕಿ ಜಯಂತೋತ್ಸವವನ್ನು ಉದ್ದೇಶ ಮಾತನಾಡಿದ ಅವರು ರಾಷ್ಟ್ರ ಪ್ರೇಮಕ್ಕೆ ಹೆಸರಾದಂತಹ ಹಲಗಲಿ ಬೇಡರು, ತ್ಯಾಗಕ್ಕೆ ಹೆಸರಾದಂತಹ ಏಕಲವ್ಯ ಮತ್ತು ಸ್ವಾಭಿಮಾನಕ್ಕೆ ಹೆಸರಾದಂತಹ ಹಕ್ಕಬುಕ್ಕ ಮತ್ತು ಮದಕರಿ ನಾಯಕರು ಹುಟ್ಟಿದಂತ ಜನಾಂಗದಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು,
ವಾಲ್ಮೀಕಿ ರಾಮಾಯಣದ ಕರ್ತೃಗಳಾದಂತ ಆದಿ ಕವಿ ಮಹರ್ಷಿ ವಾಲ್ಮೀಕಿ ಮಹರ್ಷಿಗಳು ಅಹಿಂಸೆಯ ಪ್ರತಿರೂಪದಿಂದ ರಾಮಾಯಣ ಮಹಾಕಾವ್ಯವನ್ನು ರಚಿಸಿದ್ದು
ಪ್ರಪಂಚದಲ್ಲಿರುವಂತಹ ಎಲ್ಲರಿಗೂ ಕೂಡ ರಾಮಾಯಣ ಮಹಾಕಾವ್ಯ ಜೀವತ್ಕರ್ಷವನ್ನು ಒದಗಿಸಿದೆ.
ಈ ಮಹಾ ಕಾವ್ಯದಲ್ಲಿ ಬರುವಂತಹ ಶ್ರೀರಾಮಚಂದ್ರ ಮೂರ್ತಿ ಸೀತೆ ಭರತ ಇವರ ಜೀವನದ ಮೌಲ್ಯ ಮತ್ತು ನಡವಳಿಕೆ ಸಮಾಜಕ್ಕೆ ಅನನ್ಯವಾದ ಪ್ರೇರೇಪಣೆಯನ್ನು ನೀಡಿದೆ ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಮಹಾಕಾವ್ಯವನ್ನು ರಚಿಸಿದಂತ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಅವರ ತತ್ವಗಳನ್ನು ಸಮಾಜದಲ್ಲಿ ಇರುವಂತಹ ನಾವುಗಳು ನಮ್ಮ ದೈನಂದಿನ ಜೀವನದಲ್ಲಿ ಪಾಲಿಸಬೇಕಿದೆ
ಇದರ ಮುಖಾಂತರ ಸಮಾಜಕ್ಕೆ ಒಂದು ಕೊಡುಗೆಯನ್ನು ನೀಡುವಂತಹ ಕಾರ್ಯವಾಗಬೇಕಿದೆ ಈ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಕೂಡ ಈ ದೀಕ್ಷೆ ಪಡೆಯುವ ಅಗತ್ಯವಿದೆ ಎಂದು ಹೇಳಿದರು
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಜೈಪಾಲಯ್ಯ ಮಾತನಾಡಿ ಸರ್ಕಾರ ಈ ಜನಾಂಗ ಪರಿಶಿಷ್ಟ ಜಾತಿಗೆ ಒಟ್ಟು ಆರು ಪರ್ಸೆಂಟ್ ಮೀಸಲಾತಿಯನ್ನು ಹೆಚ್ಚಿಸಿದ್ದು ಈ ಜನಾಂಗವು ಸರ್ಕಾರವನ್ನು ಅಭಿನಂದಿಸಬೇಕಿದೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಮಾಜಿ ಮಂಡಲ್ ಪಂಚಾಯತಿ ಅಧ್ಯಕ್ಷ ದೊರೆ ಭಯಣ್ಣ, ಮುಂತಾದವರು ಮಾತನಾಡಿದರು
ಈ ಸಮಾರಂಭದಲ್ಲಿ ನನ್ನಿವಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ್ ಮತ್ತು ಎಲ್ಲಾ ಸರ್ವ ಸದಸ್ಯರು ಉಪಸ್ಥಿತರಿದ್ದರು