ಬಯಲು ಸೀಮೆ ಕೆರೆಗಳಿಗೆ ಬಾಗೀನ ಅರ್ಪಿಸಿದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಬಯಲು ಸೀಮೆಯಲ್ಲಿ ವರುಣರಾಯನ ಕೃಪೆಯಿಂದ ಈಡಿ ತಾಲೂಕು ಹಸಿರು ಕಂಡಿದೆ ಇನ್ನೂ ಮನುಷ್ಯ ಸಂಕಲಕ್ಕೆ ಅಷ್ಟೆ ಅಲ್ಲದೆ ಪ್ರಾಣಿ ಸಂಕುಲಕ್ಕೂ ಇದು ವರದಾನವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ಕಡೇಹುಡೆ ಗ್ರಾಮಕ್ಕೆ ಭೇಟಿ ನೀಡಿ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರೈತರೊಂದಿಗೆ ಬಾಗಿನ ಅರ್ಪಿಸಿ ಸಂಸತಸದ ನುಡಿಗಳನ್ನು ನುಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮಳೆಯಿಲ್ಲದೆ ಬಯಲು ಸೀಮೆ ಬೆಂಗಾಡು ಹಾಗಿ ಪರಿಣಮಿಸಿತ್ತು ಆದರೆ ವರುಣರಾಯನ ಕೃಪೆಯಿಂದ ಕಳೆದ ಎರಡು ವರ್ಷಗಳಿಂದ ಸತತ ಮಳೆಯಿಂದ ಬಯಲು ಸೀಮೆಯಲ್ಲಿ ಹಸಿಕರುಕರಣ ಮನೆ ಮಾಡಿದೆ, ಇನ್ನೂ ಈಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್‌ಮೂರ್ತಿ, ನಗರಸಭೆ ಸದಸ್ಯ ರಮೇಶ್‌ಗೌಡ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ತ್ಯಾಗರಾಜ, ಹಾಗೂ ಉಪಾಧ್ಯಕ್ಷರು, ಸದಸ್ಯರುಗಳು ಮತ್ತು ಮುಖಂಡರುಗಳಾದ ಕೇಶವಣ್ಣ, ಬಸವರಾಜ್, ಅನಿಲ್, ಹನುಮಂತರಾಯ, ಮಲ್ಲಿಕಾರ್ಜುನ, ಮಧುಕುಮಾರ್, ಕಿಸನ್‌ಸೆಲ್ಲ ಅಧ್ಯಕ್ಷ ನಾಗರಾಜ್ ಹಾಗೂ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.