ನಾಯಕನಹಟ್ಟಿ:: ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತೆಗಾಗಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಲಾಗಿದೆ ಎಂದು ನಲಗೇತನಹಟ್ಟಿ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಪಿ.ಎನ್ ಮುತ್ತಯ್ಯ ಹೇಳಿದ್ದಾರೆ

ಸೋಮವಾರ ಸಮೀಪದ ನಲಗೇತನಹಟ್ಟಿ ಗ್ರಾಮದ ಹೊರವಲಯದಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಚ್ಛತೆಗಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತದೆ ಪ್ರತಿಯೊಬ್ಬರು ಆರೋಗ್ಯವಂತ ರಾಗಿರಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ನಮ್ಮ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಸುತ್ತಮುತ್ತ ಮತ್ತು ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಒಣ ಮತ್ತು ಹಸಿ ಕಸನಾಗಿ ಬೇರ್ಪಡಿಸಿ ಸ್ವಚ್ಛತಾ ವಾಹನಕ್ಕೆ ನೀಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಗೌಡ್ರು ಬೋರಯ್ಯ, ಕೆ.ಬಿ. ಬೋಸಯ್ಯ, ಬಂಗಾರಪ್ಪ, ಮಲ್ಲಿಕಾರ್ಜುನ್, ಗ್ರಾಮಸ್ಥರಾದ ನಿಂಗರಾಜ್, ಎಂ.ಬಿ. ಸಣ್ಣ ಬೋರಯ್ಯ, ಪಿಡಿಒ ರಾಜಣ್ಣ, ಕಾರ್ಯದರ್ಶಿ ಕೆಂಚಪ್ಪ, ಎಂಬಿಕೆ ಎತ್ತಿನಹಟ್ಟಿ ಗಾಯತ್ರಿ, ಕಾಯಕ ಮಿತ್ರ ಶೈಲಜಾ, ಕೂಸಿನ ಮನೆ ಸಿಬ್ಬಂದಿ ಕಾಳೆ ದುರ್ಗಾಂಬಿಕಾ, ನಾಗವೇಣಿ, ಪಂಚಾಯಿತಿ ಸಿಬ್ಬಂದಿ ಬೋರೇಗೌಡ, ಗಂಗಾಧರ್ ಇದ್ದರು.

Namma Challakere Local News
error: Content is protected !!