ಚಳ್ಳಕೆರೆ :
ಒಳ ಮೀಸಲಾತಿ ಜಾರಿಗಾಗಿ ಡಿಎಸ್ ಎಸ್ ಪ್ರತಿಭಟನೆ
ಒಳಮೀಸಲಾತಿಯನ್ನು ಸುಪ್ರೀಂ ಕೋರ್ಟಿನ ಆದೇಶದಂತೆ ರಾಜ್ಯ
ಸರ್ಕಾರ ಹಂಚಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ
ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ನಡೆಸಿದರು.
ಆಂಧ್ರ, ತೆಲಂಗಾಣ ದಲ್ಲಿ ಒಳಮೀಸಲಾತಿ
ಹಂಚಿಕೆಯಾಗಿದ್ದು, ಅದರಂತೆ
ರಾಜ್ಯ ಸರ್ಕಾರವು ಕೂಡ
ಮಾಡಬೇಕು.
ಇದಕ್ಕಾಗಿ 30 ವರ್ಷಗಳ ಹೋರಾಟ ಮಾಡಿಕೊಂಡು
ಬರಲಾಗಿದೆ. ವಿಳಂಬ ಮಾಡದೆ ಸುಪ್ರೀಂ ಕೋರ್ಟಿನ ಆದೇಶ
ಪಾಲಿಸಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಬಿಟಿ
ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.