ಚಳ್ಳಕೆರೆ : ಬೆಳಂ ಬೆಳಿಗ್ಗೆ ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಚಳ್ಳಕೆರೆ‌ ನಗರದಲ್ಲಿ‌ ನಡೆದಿದೆ.

ಹೌದು ..ಚಳ್ಳಕೆರೆ ನಗರದಲ್ಲಿ ದಿನ ನಿತ್ಯವೂ ಒಂದಿಲ್ಲೊಂದು ಒಂದು ಸ್ಥಳದಲ್ಲಿ ಕಳ್ಳತನವಾಗುವುದು ಮಾಮೂಲಿಯಾಗಿದೆ.

ಅದರಂತೆ ಇಂದು ಮುಂಜಾನೆ
ನಗರದ ಮಹಾತ್ಮಗಾಂಧಿ ಶಾಲೆಯ ಸಮೀಪ ಶಿವ ನಗರದ ಒಂದನೇ ಕ್ರಾಸ್ ಸಮೀಪ ಕಿರಾಣಿ ಅಂಗಡಿಯೊಂದರಲ್ಲಿ ಕಳ್ಳರು ಅಂಗಡಿಯ ಹಲವು ಸಾಮಗ್ರಿಗಳ ಜೊತೆ‌ ಅಂಗಡಿಯಲ್ಲಿದ್ದ ಹಣ ಕೂಡ ಎಗರಿಸಿದ್ದಾರೆ.

ರಾತ್ರಿ ಸಮಯದಲ್ಲಿ ರಾಘವೇಂದ್ರ ಎನ್ನುವವರ ಅಂಗಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ಹಲವು ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಇನ್ನು ಅಂಗಡಿ ಮಾಲೀಕ ಬೆಳಿಗ್ಗೆ ಅಂಗಡಿಯ ಬೀಗ ತೆರೆಯಲೆಂದು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಇನ್ನು ಸ್ಥಳಕ್ಕೆ ಪೋಲಿಸ್ ಇನ್ಸ್ಪೆಕ್ಟರ್ ಜೆಎಸ್. ತಿಪ್ಪೇಸ್ವಾಮಿ, ಪಿಎಸ್ಐ ತಿಮ್ಮಪ್ಪ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ನಗರದಲ್ಲಿ ಎಗ್ಗಿಲ್ಲದೆ ಕಳ್ಳತನಗಳು ನಡೆಯುತ್ತಿದ್ದು ಪ್ರಕರಣ ಕೂಡ ದಿನದಿಂದ ದಿನಕ್ಕೆ ಹೇರುಗತಿಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ, ನಗರದಲ್ಲಿ ಸಿಸಿ ಕ್ಯಾಮರಾ ಇಲ್ಲದೆ‌‌ ಇರುವುದು ಕಳ್ಳರಿಗೆ ವರದಾನವಾಗಿದೆ, ಆದರೆ ಸಿಸಿಕ್ಯಾಮರಾ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ಮಾತ್ರ ಒಂದು ಇಲಾಕೆಯಿಂದ ಮತ್ತೊಂದು ಇಲಾಖೆಯ ಮೇಲೆ ಆರೋಪ ಮಾಡುತ್ತ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವ ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಅನುದಾನದ ಸಮಸ್ಯೆ ತಿಳಿಗೊಳಿಸಲು ಕ್ಷೇತ್ರದ ಶಾಸಕರು ಮಧ್ಯಸ್ಥಿಕೆ ವಹಿಸುವರೋ ಕಾದು ನೋಡಬೇಕಿದೆ.

About The Author

Namma Challakere Local News
error: Content is protected !!