ಚಳ್ಳಕೆರೆ ನ್ಯೂಸ್ :
ಒಬ್ಬರನ್ನೊಬ್ಬರು ಭೇಟಿಯಾಗಲು ಕುಣಿ ಕುಣಿದು
ಬರುವ ಅಕ್ಕ ತಂಗಿಯರು
ಚಿತ್ರದುರ್ಗದ ನವ ದುರ್ಗಿಯರಲ್ಲಿ ಇಬ್ಬರಾದ, ಬರಗೇರಮ್ಮ
ಮತ್ತು ತಿಪ್ಪಿನಘಟ್ಟಮ್ಮ ಇಬ್ಬರು ವರ್ಷಕ್ಕೊಮ್ಮೆ, ಸಾವಿರಾರು
ಜನರ ಸಮ್ಮುಖದಲ್ಲಿ ಭೇಟಿಯಾಗುತ್ತಾರೆ.
ಈ ಅಪರೂಪದ
ಭೇಟಿಯಲ್ಲಿ, ಇಬ್ಬರು ಕುಣಿದು ಕುಪ್ಪಳಿಸುವುದು ನೋಡಲು
ಸಂಭ್ರಮವಾಗಿರುತ್ತದೆ.
ವಾದ್ಯಗಳ ತಾಳಕ್ಕೆ ತಕ್ಕಂತೆ ಹೆಜ್ಜೆ
ಹಾಕುತ್ತಾ, ಅರ್ಚಕರು ದೇವಿಯರನ್ನು ಕುಣಿಸುತ್ತಾ ಬರುತ್ತಾರೆ.
ಬುರುಜಿನಹಟ್ಟಿಯಿಂದ ಬರಗೇರಮ್ಮ, ಕರುವಿನಕಟ್ಟೆ ವೃತ್ತದಿಂದ
ತಿಪ್ಪಿನಘಟ್ಟಮ್ಮ ಬಂದು ಇಬ್ಬರು ಭೇಟಿಯಾಗುವ ಕ್ಷಣವು, ಬಹಳ
ರೋಚಕವಾಗಿರುತ್ತದೆ.