ಚಿತ್ರದುರ್ಗ
ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಮಾತ್ರ ಸ್ವಾಸ್ಥö್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಎ ತಿಪ್ಪೇಸ್ವಾಮಿ ಹೇಳಿದರು
ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿಯ ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಸಂಜೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲಾ ಸಮಿತಿ ಹಾಗೂ ಚಿತ್ರದುರ್ಗದ ಮಹುಮುಖಿ ಕಲಾ ಕೇಂದ್ರ ಗ್ರಾಮದ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿಕೊಂ ಡಿದ್ದ ಶಾಲಾ ವಾರ್ಷಿಕೋತ್ಸವ, ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉಧ್ಘಾಟಿಸಿ ಮಾತನಾಡಿದರು
ಪೋಷಕರು ತಮ್ಮ ಮನೆಗಳಲ್ಲಿ ತಮ್ಮ ಮಕ್ಕಳಿಗೆ ಶೈಕ್ಷಣಿಕ ಪರಿಸರವನ್ನುಂಟು ಮಾಡಿ ನಿಯಮಿತವಾಗಿ ಶಾಲೆಗೆ ಕಳಿಸಬೇಕು ಇದರಿಂದ ಚಿಕ್ಕಂದಿನಲ್ಲೇ ಮಕ್ಕಳು ಜ್ಞಾನಿಗಳಾಗಲು ಸಾಧ್ಯವಾಗುತ್ತದೆ ಎಂದರು
ಗ್ರಾಪA ಸದಸ್ಯ ಡಿ ಸಿದ್ದಣ್ಣ ಮಾತನಾಡಿ ಹಳ್ಳಿಗಾಡಿನ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಸರ್ಕಾರಿ ಶಾಲೆಗಳಲ್ಲೂ ಸಹ ಮಕ್ಕಳಿಗೆ ಶಾಲಾ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ನಮ್ಮ ಪರಂಪರೆಯ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು
ಶಾಲಾ ಮುಖ್ಯಶಿಕ್ಷಕ ಓ ಚಿತ್ತಯ್ಯ ಪ್ರಾಸ್ತಾವಿಕ ಮಾತನಾಡಿ ಇಂದಿನ ಆಧುನಿಕ ಕಾಲಘಟ್ಟದ ಮತ್ತು ಸಾಮಾಜಿಕ ಬದಲಾವಣೆಗೆ ತಕ್ಕಂತೆ ನಮ್ಮ ಮಕ್ಕಳಿಗೆ ತಂತ್ರಜ್ಞಾನಾಧಾರಿತ ಮತ್ತು ಚಟುವಟಿಕೆಯುತ ಶಿಕ್ಷಣ ನೀಡಿದರೆ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೊಂದಿಗೆ ಸ್ಪರ್ಧಿಸಿ ತಮ್ಮ ಗುರಿಯನ್ನು ತಲುಪಲು ಸಾಧ್ಯ ಈ ಹಿನ್ನೆಲೆ ಪೋಷಕರು, ಹಳೇವಿದ್ಯಾರ್ಥಿಗಳ ಸಂಘ, ಜನಪ್ರತಿನಿಧಿಗಳು ಉಳ್ಳವರು ಸರ್ಕಾರಿ ಶಾಲೆಗಳ ಕುಂದುಕೊರತೆಗಳನ್ನು ನೀಗಿಸಿದರೆ ಹಳ್ಳಿಯ ಮಕ್ಕಳೂ ಕೂಡ ಉನ್ನತ ಸಾಧನೆಗೈಯಲು ದಾರಿಯಾಗುತ್ತದೆ ಎಂದರು
ಶಿಕ್ಷಕ ರಾಜು ಮಾತನಾಡಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಶಿಕ್ಷಣವಲ್ಲದೇ ಸಹಪಠ್ಯ ಚಟುವಟಿಕೆ ಅತೀ ಅಗತ್ಯ ಎಂದರು
ಶಾಲಾ ಮಕ್ಕಳ ಹಬ್ಬದ ಅಂಗವಾಗಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕಲಾವಿದ ನನ್ನಿವಾಳ ಹನುಮಂತಪ್ಪ ಜನಪದ ಗೀತಾಗಾಯನ ನಡೆಸಿಕೊಟ್ಟು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಮಿತಿಯ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ ವಹಿಸಿದ್ದರು ಗ್ರಾಪಂ ಸದಸ್ಯರಾದ ವಿಜಯಮ್ಮ ಎಟಿಎಸ್, ಬಿ ವೀರಣ್ಣ ಸಿದ್ದಣ್ಣ, ಗ್ರಾಪಂ ಮಾಜಿ ಸದಸ್ಯ ಡಿ ಸಿದ್ದಪ್ಪ, ರಾಜು, ಶಾಲಾ ಸಮಿತಿಯ ಸದಸ್ಯರಾದ ಸಣ್ಣಬೋರಯ್ಯ, ಶಶಿಕಲಾಬೋರಯ್ಯ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಭದ್ರಮ್ಮ ಮುಖ್ಯಶಿಕ್ಷಕ ಓ ಚಿತ್ತಯ್ಯ ಕಲಾವಿದ ನನ್ನಿವಾಳ ಹನುಮಂತಪ್ಪ, ಶಿಕ್ಷಕರಾದ ಎಸ್ ಟಿ ಮಂಜುನಾಥ, ವಿ ಶರಣಪ್ಪ, ಪಿ ಮೇಘಾ, ಎಂ ಭವಾನಿ, ಮಹಾಲಿಂಗಪ್ಪ, ವೀರೇಶಣ್ಣ, ಬೋರಯ್ಯ ಶಾಲಾ ವಿದ್ಯಾರ್ಥಿಗಳು ಪೋಷಕರು ಗ್ರಾಮಸ್ಥರು ಇದ್ದರು
(ಪೋಟೋ ಸಿಟಿಎ ಹಬ್ಬ 8)
ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿಯ ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಸಂಜೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲಾ ಸಮಿತಿ ಹಾಗೂ ಚಿತ್ರದುರ್ಗದ ಮಹುಮುಖಿ ಕಲಾ ಕೇಂದ್ರ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ, ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಗ್ರಾಪಂ ಮಾಜಿ ಸದಸ್ಯರಾದ ಎ ತಿಪ್ಪೇಸ್ವಾಮಿ, ಡಿ ಸಿದ್ದಪ್ಪ ಉಧ್ಘಾಟಿಸಿದರು ಗ್ರಾಪಂ ಸದಸ್ಯರಾದ ವಿಜಯಮ್ಮ ಎಟಿಎಸ್, ಬಿ ವೀರಣ್ಣ ಶಾಲಾ ಸಮಿತಿಯ ಅಧ್ಯಕ್ಷ ಆರ್ ಆರ್ ತಿಪ್ಪೇಸ್ವಾಮಿ ಉಪಾಧ್ಯಕ್ಷೆ ಸುಭದ್ರಮ್ಮ, ಸದಸ್ಯರಾದ ಸಣ್ಣಬೋರಯ್ಯ, ಶಶಿಕಲಾ ರಾಜು. ಸಿದ್ದಣ್ಣ, ಮುಖ್ಯಶಿಕ್ಷಕ ಓ ಚಿತ್ತಯ್ಯ ಶಾಲಾ ಸಿಬ್ಬಂದಿ ಇದ್ದರು
(ಪೋಟೋ ಹಬ್ಬ 8)
ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ವಾರ್ಷಿಕೋತ್ಸವದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಶ್ರಾವಣಿ ವೀರ ವನಿತೆ ಓಬವ್ವನ ವೇಷದಲ್ಲಿ ಬಂದು ಪ್ರೇಕ್ಷಕರ ಗಮನ ಸೆಳೆದಳು