ಚಳ್ಳಕೆರೆ’
ನಾಗರಿಕ ಸಮುದಾಯದಲ್ಲಿ ಸವಿತಾ ಸಮಾಜವು ಒಂದು ರಾಜ್ಯ ರಾಜಕೀಯದಲ್ಲಿ ಹಾಗೂ ಶೈಕ್ಷಣಿಕ ಆರ್ಥಿಕತೆಯಲ್ಲಿ ಹಿಂದುಳಿದ ಸಮಾಜವೆಂದು ತಾಲೂಕು ದಂಡಾಧಿಕಾರಿ ರೆಹಾನ್ ಪಾಷಾ ಹೇಳಿದರು,
ಇವರು ನಗರದ ತಾಲೂಕು ಕಚೇರಿ ಆಡಳಿತ ವತಿಯಿಂದ ಹಬ್ಬಗಳ ದಿನಾಚರಣೆಯ ಹಾಗೂ ಸವಿತಾ ಸಮುದಾಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶರಣ ಸವಿತಾ ಮಹಾಋಷಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಇವರು,
ಇಂದಿನ ದಿನಮಾನಗಳಲ್ಲಿ ಸವಿತಾ ಸಮಾಜದ ಸೇವೆ ಬಹಳ ಮುಖ್ಯವಾಗಿದೆ, ಪ್ರತಿಯೊಂದು ಸಮುದಾಯದ ಜನಾಂಗದವರು ಚೌರ ಮಾಡಿಸಿಕೊಳ್ಳಲು ಸವಿತಾ ಸಮಾಜದ ಅಂಗಡಿಗಳಿಗೆ ಹೋಗಿ ಎಲ್ಲಾ ಪುಣ್ಯಕಾರ್ಯಗಳಿಗೆ ಸವಿತಾ ಸಮಾಜ ಬೇಕು, ಆದರೆ ಸವಿತಾ ಸಮುದಾಯದವರು ರಾಜ್ಯ ರಾಜಕೀಯ ಆರ್ಥಿಕವಾಗಿ ಸಫಲರಾಗಿಲ್ಲ, ಮುಂದಿನ ದಿನಗಳಲ್ಲಿ ನಿಮ್ಮ ಸಂಘಟನೆ ಮೂಲಕ ರಾಜ್ಯ ರಾಜಕೀಯಕ್ಕೆ ಹಾಗೂ ಶೈಕ್ಷಣಿಕವಾಗಿ ಪ್ರವೇಶ ಮಾಡಿ ಅಂದಾಗಲೇ ಮಾತ್ರ ನಿಮ್ಮ ಸಮುದಾಯಕ್ಕೆ ನ್ಯಾಯ ಸಿಗುತ್ತದೆ ಎಂದರು,
ಇನ್ನು ಈ ವೇಳೆ ಸವಿತಾ ಸಮಾಜದ ಖ್ಯಾತ ಪತ್ರಕರ್ತ ಕನ್ನಡ ಸಂಪಿಗೆ ಸಂಪಾದಕ ತಿಪ್ಪೇಸ್ವಾಮಿ ಮಾತನಾಡಿ,
ನಮ್ಮ ಸವಿತಾ ಸಮಾಜವು ಅನಾದಿಕಾಲದಿಂದಲೂ ಸಂಸ್ಕೃತಿಯ ನೆಲಗಟ್ಟಿನಲ್ಲಿ ಜೀವನ ನಡೆಸಿಕೊಂಡು ಬಂದಿದ್ದೇವೆ, ಇಂದಿನ ದಿನ ಬಡವರಿಂದ ಹಿಡಿದು ಪ್ರಧಾನ ಮಂತ್ರಿ ಆದವರಿಗೆ ಕೂಡ ಕ್ಷೌರಿಕ ವೃತ್ತಿಯನ್ನು ಎಲ್ಲಾ ಸಮುದಾಯಗಳಿಗೆ ಹಾಸು ಹೊಕ್ಕಾಗಿ ಎಲ್ಲಾ ಸಮಾಜದ ಸೇವೆಯ ಮೂಲಕ ಸೇವೆ ಸಲ್ಲಿಸಿದ್ದೇವೆ ಎಂದರು.
ಇನ್ನು ಈ ಸಂದರ್ಭದಲ್ಲಿ ಶ್ರೀನಿವಾಸ್, ಶಿವರಾಂ, ಪ್ರಕಾಶ್, ನಾಗರಾಜ್, ಚಂದ್ರಶೇಖರ್, ಬಿಸಿಎಂ ಅಧಿಕಾರಿ ಲೀಲಾವತಿ , ನಿರೂಪಕ ಶ್ರೀನಿವಾಸ್ ಸೇರಿದಂತೆ ಅನೇಕ ಸವಿತಾ ಸಮುದಾಯದ ಮುಖಂಡರುಗಳು ಭಾಗಿಯಾಗಿದ್ದರು