ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಗಗೊಂಡನಹಳ್ಳಿಯ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಇದರ ಅಧಿಕಾರ ಮತ್ತು ಆಡಳಿತಗೊಳಪಟ್ಟಿರುವ ಶಾಖಾ ಮಠ ಶ್ರೀ ಚಲುಮೇರುದ್ರಸ್ವಾಮಿ ಗದ್ದುಗೆ ಮಠ ನಾಗ ಗೊಂಡನಹಳ್ಳಿ ಶ್ರೀ ಚಲುಮೇರುದ್ರಸ್ವಾಮಿ ರಥೋತ್ಸವ ಹಾಗೂ ಜಾನಪದ ಜಾತ್ರೆ ಫೆ.18 ರಂದು ಭಾನುವಾರದಂದು ರಥೋತ್ಸವ ಹಾಗೂ ಫೆ.19 ಸೋಮವಾರ ಹೂವಿನ ಅಡ್ಡ ಪಲ್ಲಕ್ಕಿ ಉತ್ಸವ ಮಂಗಳವಾರ ಮಹಾಮಂಗಳಾರತಿ ಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಚಲುಮೇರುದ್ರಸ್ವಾಮಿಯ ಐತಿಹ್ಯ:-ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯಂತೆ ಪವಾಡ ಪುರುಷರಾದ ಚಲುಮೇರುದ್ರಸ್ವಾಮಿಯವರು ನಾಗ ಗೊಂಡನಹಳ್ಳಿ ಸಮೀಪ ಇರುವ ವೇದಾವತಿ ನದಿಯ ದಂಡೆಯ ಮೇಲಿರುವ ಈಶ್ವರ ದೇವಾಲಯ ಪೂಜೆ ಮಾಡುತ್ತಿದ್ದರು.
ಇಲ್ಲಿನ ಸುತ್ತಮುತ್ತಲಿನ ಜನರು ನದಿಯ ದಡದ ಮೇಲೆ ದಿನಾಲು ದನಗಳನ್ನು ಕಾಯಲು ಬರುತ್ತಿದ್ದರಂತೆ ಆಗ ಸ್ವಾಮಿಗೆ ಹಾಲನ್ನು ನೀಡುತ್ತಿದ್ದರಂತೆ ಅದಕ್ಕೆ ಪ್ರತಿಯಾಗಿ ಸ್ವಾಮಿ ತಮ್ಮ ಬೆತ್ತದಿಂದ ನದಿಯಲ್ಲಿನ ಮರಳನ್ನು ಮುಟ್ಟಿ ಪ್ರಸಾದವನ್ನಾಗಿ ಪವಾಡ ಮಾಡುತ್ತಿದ್ದರು.ಅದನ್ನು ಅಲ್ಲಿ ದನ ಕಾಯುತ್ತಿದ್ದವರು ಸೇವಿಸುತ್ತಿದ್ದರು ಎಂಬ ಪ್ರತೀತಿ ಇದೆ.
ಹೀಗೆ ಪವಾಡ ಮಾಡುತ್ತಿದ್ದ ಚಲುಮೇರುದ್ರಸ್ವಾಮಿಯವರನ್ನು ಈ ಭಾಗದ ಸುತ್ತಮುತ್ತಲಿನ ಹಳ್ಳಿಯವರು ಇಂದಿಗೂ ಪೂಜಿಸುತ್ತಾರೆ. ಜೊತೆಗೆ ಪ್ರತಿ ಮನೆಯಲ್ಲೂ ಚಲ್ಮೇಶ್,ಚಲುಮಪ್ಪ ಚಲುಮೇಶ್,ಚಲುಮೇರುದ್ರ,ಚಲುಮಕ್ಕ ಹೀಗೆ ಸ್ವಾಮಿಯ ಹೆಸರನ್ನು ಇಟ್ಟಿರುವ ನಿದರ್ಶನವನ್ನು ಕಾಣಬಹುದು.
ಚಲುಮೇರುದ್ರಸ್ವಾಮಿಯವರು ನಾಗ ಗೊಂಡನಹಳ್ಳಿ ಸಮೀಪ ಇರುವ ವೇದಾವತಿ ನದಿಯ ದಡದ ಮೇಲೆ ಜೀವ ಸಮಾಧಿಯಾಗಿದರಂತೆ . ನಂತರವೂ ಅಲ್ಲಿನ ದನ ಕಾಯುತ್ತಿದ್ದವರು ಸ್ವಾಮಿಯ ಸಮಾಧಿ ಮೇಲೆ ದಿನಾಲು ಹಾಲು ಇಟ್ಟು ಬರುತ್ತಿದ್ದರಂತೆ ಈ ಹಾಲನ್ನು ಸ್ವಾಮಿಯು ನಾಗರಹಾವಿನ ರೂಪದಲ್ಲಿ ಬಂದು ಕುಡಿದು ಹೋಗುತ್ತಿದ್ದರಂತೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ.
ಸ್ವಾಮಿಯವರಿಗೆ ಹಸಿ ಶೇಂಗಾ ಸಜ್ಜೆ ಹಾಗೂ ಅಕ್ಕಿಯನ್ನು ನೆನೆಸಿ ಅದಕ್ಕೆ ಬೆಲ್ಲ ಸೇರಿಸಿ ಸೇವಿಸುತ್ತಿದ್ದರು.ಹಾಗಾಗಿ ಇಂದಿಗೂ ದೇವಾಲಯದಲ್ಲಿ ಪ್ರಸಾದ ಮಾಡಿ ಭಕ್ತಾದಿಗಳಿಗೆ ನೀಡುವುದು ವಿಶೇಷವಾಗಿದೆ ಎಂದು ಮತ್ಸಮುದ್ರದ
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಎ. ಚಲ್ಮೇಶ್ ಹೇಳುತ್ತಾರೆ.