.
ಚಳ್ಳಕೆರೆ : ಚಳ್ಳಕೆರೆ ತಾಲ್ಲೂಕು ಲಾರಿ ಮಾಲೀಕರು ಹಾಗೂ ಚಾಲಕರ
ಸಂಘದ ವತಿಯಿಂದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(1) ಮತ್ತು (2) ಕಾಯ್ದೆ ಅನ್ವಯ 10 ವರ್ಷ ಜೈಲು, 7 ಲಕ್ಷ ದಂಡದ ಕಾನೂನನ್ನು ಹಿಂಪಡೆಯುವ ಬಗ್ಗೆ ತಾಲೂಕಿನ ಲಾರಿ ಮಾಲೀಕರ ಸಂಘದಿAದ ಹಾಗೂ ವಿವಿಧ ಚಾಲಕರು ತಾಲೂಕು ಕಛೇರಿಗೆ ದಾವಿಸಿ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಸಲ್ಲಿಸಿದರು.
ಇನ್ನೂ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದಿAದ ನಗರದ ಮಾರುಕಟ್ಟೆಯಿಂದ ನೆಹರು ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ನಗರದ ತಾಲೂಕು ಕಛೇರಿಗೆ ದಾವಿಸಿ ತಹಶಿಲ್ದಾರ್ ರೇಹಾನ್ ಪಾಷ ಗೆ ಮನವಿ ಸಲ್ಲಿಸಿದರು.
ಇನ್ನೂ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಭರಮಣ್ಣ ಮಾತನಾಡಿ, ದೇಶದ ಗೃಹ ಸಚಿವರಾದ ಅಮಿತ್ ಷಾ ರವರು ಇತ್ತೀಚೆಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(1) ಮತ್ತು(2) ಕಾಯ್ದೆ ಅನ್ವಯ, 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸುವ ಕಾನೂನು ಎಲ್ಲಾ ಚಾಲಕರು ಮತ್ತು ಮಾಲೀಕರಿಗೆ ಜೀವದ ಕಂಠಕವಾಗಿದೆ.
ಈ ಹಿಂದೆ ಭಾರತೀಯ ನ್ಯಾಯ ಸಹಿತೆ ಸೆಕ್ಷನ್ 106(1) ಹಿಟ್ ಅಂಡ್ ರನ್ ಕೇಸ್ ಗೆ 2 ವರ್ಷ ಜೈಲು ಶಿಕ್ಷೆಯನ್ನು ಇದೀಗ ಹೊಸ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 106(2) ನಲ್ಲಿ ಮುಂದುವರೆಸಿ 10 ವರ್ಷ ಜೈಲು ಶಿಕ್ಷೆ ಮತ್ತು 7 ಲಕ್ಷ ದಂಡವನ್ನು ವಿಧಿಸುತ್ತದೆ ಎಂಬ ಕಾನೂನು ಇದು ಅತ್ಯಂತ ಅಮಾನವೀಯ ಹಾಗೂ ಚಾಲಕರ ಮೇಲೆ ಶೋಷಣೀಯಕರವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಲಕರು ಹಾಗೂ ಮಾಲೀಕರ ಹಿತದೃಷ್ಟಿ ಮತ್ತು ಮಾನವೀಯತೆಯ ಮೇರೆಗೆ ಈ ಪ್ರಸ್ತುತ ಲಾಗೂ ಮಾಡಿರುವ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(1) ಮತ್ತು (2) ಕಾಯ್ದೆ ಅನ್ವಯ, 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸುವ ಕಾನೂನನ್ನು ಹಿಂಪಡೆಯಬೇಕು ಎಂದು ಚಳ್ಳಕೆರೆ ತಾಲ್ಲೂಕು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷರು, ಚಳ್ಳಕೆರೆ ಮಿನಿ ಲಾರಿ ಮಾಲೀಕರ ಸಂಘ ಅಧ್ಯಕ್ಷ ದನಂಜಯ್, ಚಳ್ಳಕೆರೆ ಟ್ಯಾಂಕರ್ ಲಾರಿ ಮಾಲೀಕರ ಸಂಘ ಅಧ್ಯಕ್ಷರು, ಹಾಗೂ ನರಸಿಂಹ, ಆನಂದಪ್ಪ, ಮೋಹನ್, ಹನುಮಂತ. ಪ್ರಸನ್ನ ಕುಮಾರ್, ತಿಪ್ಪೇಸ್ವಾಮಿ, ಅಭಿಷೇಕ್, ಪ್ರಸಾದ್, ದಿನೇಶ್, ತಿಪ್ಪೇಸ್ವಾಮಿ, ಇತರರು ಪಾಲ್ಗೊಂಡಿದ್ದರು