ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಬಡವರ ಬಾದಾಮಿ ಎಂದೇ ಕರೆಯುವ ಬಯಲು ಸೀಮೆ ರೈತರ ಬೆನ್ನುಲಾಗಿರುವ ನೆಲಗಡಲೆ ತಾಲೂಕಿನಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ.
ತಾಲೂಕಿನಲ್ಲಿ ವಾಡಿಕೆ ಮಳೆ ಜಾಸ್ತಿ ಬಂದಿದ್ದರು ಕೂಡ ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ರೈತನ ಬಿತ್ತನೆಯ ಸುಗ್ಗಿ ಕಾಲ ಮುಂದೂಡುವAತಾಗಿದೆ.
ಹೌದು ಚಳ್ಳಕೆರೆ ಎಂದರೆ ಒಂದು ಕಾಲದಲ್ಲಿ ಆಯಿಲ್ ಸಿಟಿ ಎಂದು ಕರೆಯಲ್ಪಡುವ ಈ ನಗರದಲ್ಲಿ ಶೇಂಗಾ ಅತೀ ಹೆಚ್ಚಾಗಿ ಬೆಳೆಯ ಪ್ರದೇಶವಾಗಿ ಇಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚಿನ ಆಯಿಲ್ ಗಿರಣಿಗಳು ತಿರುಗುತ್ತಿದ್ದವು ಆದರೆ ಮಳೆ ಕೊರತೆ, ರೈತನ ಹಿತಾಸ್ತಕಿ ಈಗೇ ಒಂದಲ್ಲ ಒಂದು ಕಾರಣದಿಂದ ಗಿರಿಣಿಗಳು ಮುಚ್ಚಲ್ಪಟ್ಟವು ಇನ್ನೂ ರೈತ ನಗರದತ್ತ ಉದ್ಯೋಗ ಹರಸಿ ಹೋಗುವಂತಾಗಿದೆ ಆದರೆ ಅಳಿದುಳಿದ ರೈತರು ಮಾತ್ರ ನೆಲಗಡಲಗೆ ಗಟ್ಟಿತನ ತೋರಿಸಿದ್ದಾರೆ.
ಅದರಂತೆ ಚಳ್ಳಕೆರೆ ತಾಲೂಕಿನ ಶೇಂಗಾ ಬಿತ್ತನೆ ಪ್ರದೇಶ 94 ಸಾವಿರ ಹೆಕ್ಟೆರ್ ಪ್ರದೇಶವಿದೆ ಅದರಲ್ಲಿ ಈವರೆಗೂ ಕೇವಲ 78 ಸಾವಿರ ಹೆಕ್ಟೆರ್ ಬಿತ್ತನೆಯಾಗಿದೆ. ಅದರಂತೆ ಕಳೆದ ಬಾರಿಗಿಂತ ಈವರೇಗೆ 28ಸಾವಿರ ಹೆಕ್ಟೆರ್ ಬಿತ್ತನೆ ಪ್ರದೇಶ ಕಡಿಮೆಯಾಗಿದೆ.
ಬಿತ್ತನೆಗೆ ಸೂಕ್ತವಾದ ಸಮಯ :
ಬಯಲು ಸೀಮೆಯ ಭಾಗಕ್ಕೆ ಬಿತ್ತನೆಗೆ ಸೂಕ್ತವಾದ ಸಮಯ ಎಂದರೆ ಅದು ಜೂನ್ 15 ರಿಂದ ಜುಲೈ 30 ಇನ್ನೂ ಆಗಸ್ಟ್ 15 ರೊಳಗೆ ಬಿತ್ತನೆಗೆ ಸೂಕ್ತವಾದ ಕಾಲಮಾನ ಎಂದು ಕೃಷಿ ಅಧಿಕಾರಿ ಜೆ.ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೂ ತೋಗರಿ ಬಿತ್ತನೆ ಗುರಿ ಸುಮಾರು 8ಸಾವಿರ ಹೆಕ್ಟೆರ್ ಪ್ರದೇಶವಿದೆ ಆದರೆ ಅದರಲ್ಲಿ ಈವರೆಗೆ 65ಸಾವಿರ ಹೆಕ್ಟೆರ್ ಮಾತ್ರ ಬಿತ್ತನೆ ಮಾಡಿದೆ, ಮೆಕ್ಕೆಜೋಳ ಬೆಳೆಯು ತಾಲೂಕಿನಲ್ಲಿ ಸುಮಾರು 3 ಸಾವಿರ ಹೆಕ್ಟೆರ್ ಗುರಿ ಇದೆ ಆದರೆ ತಾಲೂಕಿನಲ್ಲಿ ಸುಮಾರು 5ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಹೆಚ್ಚಿನದಾಗಿ ರೈತರು ಬಿತ್ತನೆ ಮಾಡಿದ್ದಾರೆ.ಇನ್ನೂ ಸಿರಿದಾನ್ಯಗಳಾದ ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲೆ, ಬರಗು, ರಾಗಿ, ಜೋಳದಂತಹ ಬೆಳೆಗಳ ಬಿತ್ತನೆ ಈ ಬಾರಿ 1.ಸಾವಿರ ಎಕರೆ ಬಿತ್ತನೆ ಹಾಗಿದೆ ಇನ್ನೂ 20ದಿನಗಳಲ್ಲಿ ರೈತನ ಕೈ ಸೇರುತ್ತದೆ ಎನ್ನಲಾಗಿದೆ.
ವಾಡಿಕೆ ಮಳೆಯ ಪ್ರಮಾಣ :
ಬಯಲು ಸೀಮೆ ಪ್ರದೇಶದಲ್ಲಿ ಮಳೆಯದ್ದು ದೊಡ್ಡ ಸವಾಲು ಕೂಡ ಹೌದು ಇಲ್ಲಿನ ವಾಡಿಕೆ ಮಳೆ ಪ್ರಮಾಣ ಜನವರಿಯಿಂದ ಆಗಸ್ಟ್ ವರೆಗೆ ಸುಮಾರು 176 ಎಂ.ಎA ಬರಬೇಕಿತ್ತು ಆದರೆ 189 ಎಂಎA ಮಳೆ ಬಂದಿದೆ. ಆದರೆ ಸರಿಯಾದ ಸಮಯಕ್ಕೆ ಬಾರದ ಮಳೆ ರೈತನಿಗೆ ಮಾರಕವಾಗಿದೆ,
ಇನ್ನೂ ಬಿತ್ತನೆ ಪ್ರದೇಶಗಳಿಗೆ ತಾಲ್ಲೂಕಿನೆಲ್ಲೆಡೆ ಬೆಳೆಗಳ ಪರಿಸ್ಥಿತಿಯನ್ನು ಅವಲೋಕಿಸಲು ತೋಟಗಾರಿಕಾ ಹಾಗೂ ಕೃಷಿ ಅಧಿಕಾರಿಗಳ ಜಂಟಿ ನೇತೃತ್ವದಲ್ಲಿ ಕೃಷಿ ವಿಜ್ಞಾನಿಗಳಾದ ಓಂಕಾರಪ್ಪ ಜೊತೆ ಸಹಾಯಕ ಕೃಷಿ ನಿರ್ದೇಶಕರಾದ ಜೆ.ಅಶೋಕ್ ಹಾಗೂ ವಿರುಪಾಕ್ಷಪ್ಪ ಇಂದು ರೈತರ ಜಮೀನುಗಳಿಗೆ ಬೇಟಿ ನೀಡಿ ಬೆಳೆಗಳ ಬಗ್ಗೆ ಅವಲೋಕಿಸಿದರು.

ತೊಗರಿ ಬೆಳೆಯಲ್ಲಿ ಹಳದಿ ಎಲೆ ವೈರಸ್ ರೋಗ :
ತೊಗರಿ ಬೆಳೆಯಲ್ಲಿ ಹಳದಿ ಎಲೆ ವೈರಸ್ ರೋಗ ಕಾಣಿಸುತ್ತಿದ್ದು, ತಮ್ಮ ಜಮೀನುಗಳಲ್ಲಿ ಅಲ್ಲಲ್ಲಿ ಕಾಣುತ್ತಿರುವ ಹಳದಿ ಎಲೆಯ ಗಿಡಗಳನ್ನು ಕಿತ್ತು ಹಾಕವುದು, ಅಂತರ್ವ್ಯಾಪಿ ಕೀಟನಾಶಕಗಳಾದ ಇಮಿಡಾಕ್ಲೋಪ್ರಿಡ್ 0.5 ಎಂ.ಎಲ್/ಲೀಟರ್ ನೀರಿಗೆ, ಅಥವಾ ಅಸಿಟಾಮಿಡ್ 0.5 ಎಂ.ಎಲ್/ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು, ಅದೇ ರೀತಿ ರೈತರು 45 ದಿನಗಳ ತೊಗರಿ ಬೆಳೆಯನ್ನು ಸೂಕ್ಷ್ಮವಾಗಿ ಗಮನಿಸಿ ಕೆಲವು ಗಿಡಗಳಲ್ಲಿ ಸಣ್ಣ ಗಾತ್ರದ ಎಲೆಗಳಿದ್ದು ಬೆಳವಣಿಗೆ ಕುಂಠಿತವಾಗಿರುವುದು ಕಂಡು ಬಂದಲ್ಲಿ ಇದು ಬಂಜೆ ರೋಗದ ಲಕ್ಷಣಗಳಿದ್ದು ಹತೋಟಿಗಾಗಿ ಪ್ರೊಪಾರ್ಗೈಟ್ 2 ಮಿ.ಲಿ ಅಥವಾ ಫಿನಾಜಾಕ್ವಿನ್ 1.7 ಮಿ.ಲೀ 1 ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು, ಹಾಗೂ ಈ ಲಕ್ಷಣಗಳ ಗಿಡಗಳು ಕಂಡು ಬಂದಲ್ಲಿ ಸದರಿ ಗಿಡಗಳನ್ನು ಕಿತ್ತು ಸುಟ್ಟು ಹಾಕಬೇಕು, ತೊಗರಿಯನ್ನು ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ತಡವಾಗಿ ಬಿತ್ತನೆಯಾಗಿದ್ದು ಹೆಚ್ಚಿನ ರೋಗ ಮತ್ತು ಕೀಟ ಬಾಧೆ ಬರುವ ಸಾಧ್ಯತೆ ಇರುವುದರಿಂದ ಸಕಾಲದಲ್ಲಿ ಕೃಷಿ ಇಲಾಖೆಗೆ ಭೇಟಿ ನೀಡಿ ಸೂಕ್ತ ಸಲಹೆ ಪಡೆಯಬೇಕು ಎಂದು ಹೇಳಿದ್ದಾರೆ.

*****
ಶೇಂಗಾ ಬೆಳೆಯಲ್ಲಿ (ಸುಳಿ ನಂಜಾಣು ರೋಗ ಹಾಗೂ ಅಫಿಡ್ (ಸಸ್ಯಹೇನು) ಮತ್ತು ತ್ರಿಪ್ ರಸ ಹೀರುವ ಕೀಟಗಳ ಹಾವಳಿ ಕಂಡು ಬಂದಿರುತ್ತದೆ. ತ್ರಿಪ್ಪೆ ಹುಳುಗಳು ರಸ ಹೀರುವುದರ ಜೊತೆಗೆ ಸುಳಿ ಕೊಳೆ ನಂಜಾಣು ರೋಗವನ್ನು ಹರಡುತ್ತವೆ. ನಂಜಾಣು ಪೀಡಿತ ಗಿಡಗಳ ಕಾಡಿ ಎಲೆಗಳು ಮುಟುರಾಗಿ ಸುಟ್ಟಂತೆ ಕಾಣುತ್ತದೆ. ಈ ರೋಗ (ನಂಜಾಣು) ಹರಡಿದ ನಿಯಂತ್ರಣ ಕಷ್ಟ ಸಾಧ್ಯ ಆದರೆ ನಂಜಾಣು ಹರಡುವ ಕೀಟಗಳಾದ ತಿಪ್‌ಗಳನ್ನು ಇಮಿಡಾಕ್ಲೋಪ್ರಿಡ್ 0.5 ಎಂ.ಎಲ್/1 ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು.

  • ಕೃಷಿ ವಿಜ್ಞಾನಿಗಳಾದ ಓಂಕಾರಪ್ಪ

ಬಾಕ್ಸ್ ಮಾಡಿ :
ತಡವಾಗಿ ಶೇಂಗಾ ಬಿತ್ತನೆ ಮಾಡಿದ ರೈತರು ಶೇಂಗಾ ಬೆಳೆಗಳಿಗೆ ವೈರಸ್ ಬರುವ ಸಾಧ್ಯತೆ ಇದೆ ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ತಮ್ಮ ಜಮೀನುಗಳಿಗೆ ವೈರಸ್ ಬಾರದ ರೀತಿಯಲ್ಲಿ ಔಷಧಿ ಸಿಂಪಡಿಸಿಕೊAಡು ವಿಜ್ಞಾನಿಗಳ ಬೇಟಿ ಮಾಡಿ ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬೇಕು.
ಜೆ.ಅಶೋಕ್ ಕೃಷಿ ಸಹಾಯಕ ನಿರ್ದೇಶಕ ಚಳ್ಳಕೆರೆ

About The Author

Namma Challakere Local News
error: Content is protected !!