ಚಳ್ಳಕೆರೆ : ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸ ಮಾಡಲು ಬರುವ ಹಳ್ಳಿಗಾಡಿನ ವಿದ್ಯಾರ್ಥಿಗಳು ತಮ್ಮ ಗಮನ ಓದಿನ ಕಡೆ ಮಾತ್ರ ಇರಬೇಕು ಸರಕಾರ ಹಾಗೂ ಸ್ಥಳೀಯವಾಗಿ ನಿಮ್ಮ ವ್ಯಾಸಂಗಕ್ಕೆ ಪೂರಕವಾದ ವಾತವರಣ ಕಲ್ಪಿಸಿದ್ದೆವೆ ಇನ್ನೂ ನೀವು ನಮಗೆ ಕೊಡುವ ಕಾಣಿಗೆ ನಿಮ್ಮ ಅಂಕಗಳು ಮಾತ್ರ ಎಂದು ಶಾಸಕ ಟಿ.ರಘಮೂರ್ತಿ ಹೇಳಿದರು.
ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕ್ರೀಡಾ, ಸಂಸ್ಕ್ರಾತಿಕ ಎನ್.ಎಸ್.ಎಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇನ್ನೂ ಕಾಲೇಜಿನ ಸರ್ವತೋಮುಖ ಅಭಿವೃದ್ದಿಗೆ ಸ್ಪಂದಿಸುತ್ತೆನೆ ಅದರಂತೆ ನಿಮಗೆ ಅಗತ್ಯತೆ ಇರುವ ಭೋದನಾ ಕೊಠಡಿಗಳು, ಆವರಣದ ತಡೆಗೋಡೆ ಈಗೇ ಎಲ್ಲಾ ಕಲಿಕೆಗೆ ಪೂರಕವಾದ ಮೂಲಭೂತ ಸೌಲಭ್ಯ ನೀಡಿದ್ದೆವೆ ಇನ್ನೂ ನಿಮ್ಮ ಬೇಡಿಕೆಯಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾಂಗಣಕ್ಕೆ ಕ್ರಮ ಕೈಗೊಳ್ಳುವೆ ಎಂದರು.
ಇನ್ನೂ ಕಾಲೇಜಿನ ಪ್ರಾಶುಂಪಾಲರಾದ ರವೀಶ್ ಮಾತನಾಡಿ, ಕಾಲೇಜಿನ ಪಕ್ಕದಲ್ಲೆ ಸ್ಮಾಶನ ಇರುವುದರಿಂದ ಇಲ್ಲಿ ಕಳ್ಳರು ಹಾಗೂ ಕೆಲವು ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ, ಕಾಲೇಜಿನ ಸಿಸಿಕ್ಯಾಮರ ಕದ್ದೋಯ್ದಿದ್ದಾರೆ, ಇನ್ನೂ ಭೋಧನೆ ವೇಳೆ ಕಿಟಕಿಗೆ ಕಲ್ಲು ಹೊಡೆಯುವುದು ಗಮನಕ್ಕೆ ಬಂದಿದೆ ಈಗೇ ಪೊಲೀಸ್ ಬಂದೋಬಸ್ತ್ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರವೀಶ್, ಎನ್‌ಎಸ್‌ಎಸ್ ಘಟಪದ ಶಾಂತಕುಮಾರಿ, ಉಪನ್ಯಾಸಕರು, ಕಾಲೇಜಿನ ಖಜಾಂಚಿ ರುದ್ರಮುನಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಕೋಣಪ್ಪ, ಜ್ಯೋತಿ ಗುರುಸ್ವಾಮಿ, ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಗಿರಿಯಪ್ಪ, ನಗರಸಭೆ ಸದಸ್ಯರಾದ ಸುಮಕ್ಕ ಆಂಜನಪ್ಪ, ಮುಖಂಡರಾದ ಮೂಡಲಗಿರಿಯಪ್ಪ, ಮುಖಂಡರು, ಕಾರ್ಯಕರ್ತರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.