ಚಳ್ಳಕೆರೆ: ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ವಿಜ್ಞಾನಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ, ತೋಟಗಾರಿಕೆ ತರಕಾರಿ ಶಾಸ್ತ್ರ ವಿಭಾಗದ ವಿಜ್ಞಾನಿ ಹಾಗೂ ಉಪನ್ಯಾಸಕಿ ಮಮತಾ ಗುರುಗಳ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ವಿದ್ಯಾರ್ಥಿನಿಯರು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡು ದುಡಿಮೆಯ ಮಾರ್ಗ ಕಂಡುಕೊAಡು ಸ್ವತಂತ್ರವಾಗಿ ಬದುಕುವ ಛಲ ಹೊಂದಬೇಕು ನಾನು ಸಹ ಇದೇ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿ ಓದಿದ್ದೇನೆ ಈ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕರಿದ್ದು ನನಗೆ ಎಲ್ಲಾ ಶಿಕ್ಷಕರ ಉತ್ತಮ ಮಾರ್ಗದರ್ಶನ ದೊರೆತಿದ್ದರಿಂದಲೇ ನಾನು ನಿಮ್ಮ ಮುಂದೆ ವಿಜ್ಞಾನಿಯಾಗಿ ಹಾಗೂ ಉಪನ್ಯಾಸಕಿಯಾಗಿ ನಿಲ್ಲಲು ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಒತ್ತು ನೀಡಿ ಉತ್ತಮ ಅಂಕಗಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆಗಳನ್ನು ಪಡೆದು ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು, ಸಮಾಜದಲ್ಲಿ ಹೆಮ್ಮೆಪಡುವಂತೆ ಬದುಕಿ ತೋರಿಸಬೇಕು ಇನ್ನೂ ಯಾರೂ ಸಾಧಿಸದ ಸಾದನೆಯನ್ನು ನಾನು ಸಾಧಿಸಬೇಕು ಎಂಬುದು ನನ್ನ ಅಜ್ಜಿಯ ಕನಸಾಗಿತ್ತು ನಮ್ಮ ಕುಟುಂಬದಲ್ಲಿ ತೋಟಗಾರಿಕೆಯ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿರಲಿಲ್ಲ ಹಾಗಾಗಿ ನಾನು ತೋಟಗಾರಿಕೆ ವಿಭಾಗದ ತರಕಾರಿ ಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಉನ್ನತ ಪದವಿ ಪಡೆದೆನು ಹೆಣ್ಣು ಮಕ್ಕಳು ಹೆಚ್ಚಿನದಾಗಿ ವಿದ್ಯಾಭ್ಯಾಸ ಮಾಡಿದರೆ ವಿವಾಹ ಮಾಡುವಾಗ ತೊಂದರೆಯಾಗುತ್ತದೆ ಎಂದರು.
ಶಿಕ್ಷಕಿ ಉಮಾದೇವಿ ಮಾತನಾಡಿ ಶಾಲಾ ದಿನಗಳಲ್ಲಿ ಮಮತಾರವರು ಉತ್ತಮ ವಿದ್ಯಾರ್ಥಿನಿಯಾಗಿದ್ದರು ಅವರ ಪೋಷಕರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದಿದ್ದರಿಂದ ಸರ್ಕಾರಿ ಶಾಲೆಯಲ್ಲಿ ದೊರೆಯುವ ಅಲ್ಪ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಅಲಂಕರಿಸುವುದರಿAದ ಇಂದು ನಮ್ಮ ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಇಂದಿನ ವಿದ್ಯಾರ್ಥಿಗಳು ಸಹ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ವೇಣಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಉಮಾದೇವಿ ಕುಸುಮಾವತಿ ಪೂರ್ಣಿಮಾ ಗಂಗಮ್ಮ ವನಜಾಕ್ಷಿ ರಾಜ್ ಕುಮಾರ್, ಶಿವಣ್ಣ,ನಾಗರಾಜ್ ಪ್ರಕಾಶ್ ಸೇರಿದಂತೆ ಶಾಲೆಯ ವಿಧ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು